ಬೆಳ್ತಂಗಡಿ: ಪ್ರಧಾನ ಮಂತ್ರಿಗಳ 20 ಲಕ್ಷ ಕೋಟಿ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಈ ವರ್ಷದ ಬಹು ದೊಡ್ಡ ನಾಟಕ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಇತಿಹಾಸ ನೆನಪಿಸಿಕೊಂಡು ಇದೊಂದು ಈ ವರ್ಷದ ದೊಡ್ಡ ನಾಟಕ ಎಂದು ಭಾವಿಸುತ್ತೇನೆ. ಇವತ್ತು 20 ಲಕ್ಷ ಕೋಟಿ ಅಂದರೆ ಬಹುಶಃ ಭಾರತದ ಒಟ್ಟು ಪ್ರಜೆಯ ಮೇಲೆ ಎಷ್ಟು ಬರುತ್ತದೆ ಎಂದು ನನಗೆ ಲೆಕ್ಕ ಹಾಕಲು ಬರುವುದಿಲ್ಲ. ಸುಮಾರು 135 ಕೋಟಿ ಜನಸಂಖ್ಯೆಯಲ್ಲಿ 15 ರಿಂದ 20 ಕೋಟಿ 5 ವರ್ಷ ಕೆಳಗಿನವರು, 80 ವರ್ಷಕ್ಕಿಂತ ಮೇಲ್ಪಟ್ಟವರು, ಸುಮಾರು 10ರಿಂದ 20 ಕೋಟಿ ಇರಬಹುದು. ಉಳಿದ 80 ರಿಂದ 90 ಕೋಟಿಯಲ್ಲಿ 50% ಶ್ರಮಿಕ ವರ್ಗದವರು ಮತ್ತು ಬಡವರು ಇರಬಹುದು. ಒಂದು ವೇಳೆ ಈ ಪ್ಯಾಕೇಜ್ ಸಿಕ್ಕಿದರೆ ಭಾರತ ದೇಶದ ಪ್ರಜೆಗಳ ಭಾಗ್ಯ ಎಂದು ನಾನು ಭಾವಿಸುತ್ತೇನೆ.