ಕರ್ನಾಟಕ

karnataka

ETV Bharat / state

ಪಿ ವಿ ಸಿಂಧು, ಪಿಎಂ ಮೋದಿಗೆ ಮಂಗಳೂರು ಪಬ್ಬಾಸ್​ನಿಂದ ಐಸ್ ಕ್ರೀಂ ಆಫರ್ - Pabbas Ideal Cafe tweet about ice cream treat

ಪಬ್ಬಾಸ್ ಐಡಿಯಲ್ ಕೆಫೆಯು 'ಆತ್ಮೀಯ ಮೋದಿಯವರೇ, ತಾವು ಪಿ.ವಿ. ಸಿಂಧು ಅವರಿಗೆ ಭರವಸೆ ನೀಡಿದ್ದೀರಿ. ಈಗ ಅವರು ಪದಕ ಗೆದ್ದು ಬಂದಿದ್ದಾರೆ. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿಯೊಂದಿಗೆ ನಿಮಗೂ ಅತ್ಯುತ್ತಮ ಐಸ್ ಕ್ರೀಂ ನೀಡಿ ಸಂಭ್ರಮಿಸಲು ಉತ್ಸುಕರಾಗಿದ್ದೇವೆ' ಎಂದು ಟ್ವೀಟ್ ಮಾಡಿದೆ.

pabbas-ideal-cafe-tweet-about-ice-cream-treat-for-modhi-and-p-v-sindhu
ಪಬ್ಬಾಸ್ ನಿಂದ ಸಿಂಧು, ಮೋದಿಗೆ ಐಸ್ ಕ್ರೀಂ ಆಫರ್

By

Published : Aug 3, 2021, 3:34 PM IST

Updated : Aug 3, 2021, 10:59 PM IST

ಮಂಗಳೂರು:ನಗರದ ಪ್ರಸಿದ್ಧ ಪಬ್ಬಾಸ್ ಐಡಿಯಲ್ ಕೆಫೆಯು ಟೋಕಿಯೋ ಒಲಿಂಪಿಕ್ ನಲ್ಲಿ ನಡೆದ ಬ್ಯಾಡ್ಮಿಂಟನ್ ಆಟದಲ್ಲಿ ಕಂಚಿನ ಪದಕ ಜಯಿಸಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು ಅವರೊಂದಿಗೆ ಕುಳಿತು ಪ್ರಧಾನಿ ಮೋದಿ ಐಸ್ ಕ್ರೀಂ ಸವಿಯಲಿದ್ದಾರೆ. ಈ ಐಸ್​ ಕ್ರೀಂಅನ್ನು ಟ್ರೀಟ್ ಕೊಡುವುದಾಗಿ ಟ್ವೀಟ್ ಮಾಡಿ ಪಬ್ಬಾಸ್​ ಎಲ್ಲರ ಗಮನ ಸೆಳೆದಿದೆ.

ಪಬ್ಬಾಸ್ ಐಡಿಯಲ್ ಕೆಫೆ ಟ್ವೀಟ್​

ಪ್ರಧಾನಿ ಮೋದಿಯವರು ಪಿ.ವಿ. ಸಿಂಧು ಅವರಿಗೆ ಒಲಿಂಪಿಕ್ ನಲ್ಲಿ ಬ್ಯಾಡ್ಮಿಂಟನ್ ಆಟದಲ್ಲಿ ಪದಕ ಗೆದ್ದು ಬಂದಲ್ಲಿ ಜೊತೆಯಾಗಿ ಐಸ್ ಕ್ರೀಂ ಸವಿಯೋಣ ಎಂದು ಆಫರ್ ನೀಡಿದ್ದರು. ಇದೀಗ ಪಿ.ವಿ. ಸಿಂಧು ಕಂಚಿನ ಪದಕ ಗೆದ್ದು ಬಂದಿದ್ದಾರೆ. ಹೀಗಾಗಿ ಮೋದಿಯವರು ಮತ್ತೆ ಟ್ವೀಟ್ ಮಾಡಿ ಐಸ್ ಕ್ರೀಂ ಸವಿಯುವ ವಿಚಾರವನ್ನು ನೆನಪಿಸಿದ್ದಾರೆ‌. ಪ್ರಧಾನಿ ಟ್ವೀಟ್ ಬೆನ್ನಲ್ಲೇ ಈ ಐಸ್ ಕ್ರೀಂ ಅನ್ನು ತಾವು ಒದಗಿಸುತ್ತೇವೆ ಎಂದು ಮಂಗಳೂರಿನ ಪ್ರಸಿದ್ಧ ಐಸ್ ಕ್ರೀಂ ಪಾರ್ಲರ್ ಪಬ್ಬಾಸ್ ಐಡಿಯಲ್ ಕೆಫೆ ಟ್ವೀಟ್ ಮಾಡಿದೆ.

ಪಬ್ಬಾಸ್ ಐಡಿಯಲ್ ಕೆಫೆ ಟ್ವೀಟ್​

ಈ ಕುರಿತು ಟ್ವೀಟ್ ಮಾಡಿರುವ ಕೆಫೆಯು 'ಆತ್ಮೀಯ ಮೋದಿಯವರೇ, ತಾವು ಪಿ.ವಿ.ಸಿಂಧು ಅವರಿಗೆ ಭರವಸೆ ನೀಡಿದ್ದೀರಿ. ಈಗ ಅವರು ಪದಕ ಗೆದ್ದು ಬಂದಿದ್ದಾರೆ. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿಯೊಂದಿಗೆ ನಿಮಗೂ ಅತ್ಯುತ್ತಮ ಐಸ್ ಕ್ರೀಂ ನೀಡಿ ಸಂಭ್ರಮಿಸಲು ಉತ್ಸುಕರಾಗಿದ್ದೇವೆ' ಎಂದಿದೆ.

ಓದಿ:ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ..

Last Updated : Aug 3, 2021, 10:59 PM IST

ABOUT THE AUTHOR

...view details