ಮಂಗಳೂರು:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದೇ ನಮ್ಮ ಮುಖ್ಯ ಗುರಿ. ಆದರೆ ರಾಮ ಭಕ್ತಿಗೆ ಒಲಿಯುವ ದೇವರಲ್ಲ. ಆತ ಧರ್ಮಿಷ್ಠ. ಆದ್ದರಿಂದ ನಾವು ಧರ್ಮಿಷ್ಠರಾದರೆ ಖಂಡಿತಾ ಒಂದು ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಸಂಸ್ಕೃತ ವಿದ್ವಾಂಸ ಸತ್ಯಕೃಷ್ಣ ಭಟ್ ಹೇಳಿದರು.
ರಾಮ ಮಂದಿರ ನಿರ್ಮಾಣವೇ ನಮ್ಮ ಮುಖ್ಯ ಗುರಿ: ಸತ್ಯಕೃಷ್ಣ ಭಟ್ - undefined
ರಾಮಾಯಣ ಅಂದರೆ ರಾಮನ ಮಾರ್ಗ ಎಂದು ಅರ್ಥ. ನಾವು ರಾಮನ ಮಾರ್ಗದಲ್ಲಿ ಸಾಗಿದರೆ ಮಾತ್ರ ನಿಜವಾದ ಸತ್ಯವನ್ನು ಅರಿಯಬಹುದು. ರಾಮನ ಆಚರಣೆಯನ್ನು ಇಟ್ಟುಕೊಂಡರೆ ನಿಜವಾದ ಸತ್ಯವನ್ನು ಅರಿಯಬಹುದು. ನಿಜವಾದ ಮನುಷ್ಯ ಜನ್ಮದ ಸಾರ್ಥಕತೆ ಎನ್ನುವ ಪರಲೋಕದ ಸುಖವನ್ನು ನಾವು ಹೊಂದಬಹುದು ಎಂದು ಸಂಸ್ಕೃತ ವಿದ್ವಾಂಸ ಸತ್ಯಕೃಷ್ಣ ಭಟ್ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ ಶ್ರೀ ರಾಮೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಅವರು ಮಾತನಾಡಿದರು. ರಾಮಾಯಣ ಅಂದರೆ ರಾಮನ ಮಾರ್ಗ ಎಂದು ಅರ್ಥ. ನಾವು ರಾಮನ ಮಾರ್ಗದಲ್ಲಿ ಸಾಗಿದರೆ ಮಾತ್ರ ನಿಜವಾದ ಸತ್ಯವನ್ನು ಅರಿಯಬಹುದು. ರಾಮನ ಆಚರಣೆಯನ್ನು ಇಟ್ಟುಕೊಂಡರೆ ನಿಜವಾದ ಸತ್ಯವನ್ನು ಅರಿಯಬಹುದು. ನಿಜವಾದ ಮನುಷ್ಯ ಜನ್ಮದ ಸಾರ್ಥಕತೆ ಎನ್ನುವ ಪರಲೋಕದ ಸುಖವನ್ನು ನಾವು ಹೊಂದಬಹುದು ಎಂದು ಹೇಳಿದರು.
ಈ ಸಂದರ್ಭ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ನ್ಯಾಯವಾದಿ ರವೀಂದ್ರನಾಥ ರೈ, ಉದ್ಯಮಿ ಅಶ್ವಿತ್ ಕೊಟ್ಟಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.