ಕರ್ನಾಟಕ

karnataka

ETV Bharat / state

ಸುರಿಯುವ ಮಳೆಯಲ್ಲಿ ಟಾರ್ಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಅನಾಥ - ಮಂಗಳೂರಿನಲ್ಲಿ ಟಾರ್ಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಅನಾಥ

ನಗರದ ಬಜಾಲ್ ರೈಲ್ವೆ ಅಂಡರ್ ಪಾಸ್ ಬಳಿ ಅನಾಥನೊಬ್ಬ ಯಾವುದೇ ವ್ಯವಸ್ಥೆ ಇಲ್ಲದೆ ಟಾರ್ಪಲ್ ಅಡಿಯಲ್ಲಿಯೇ ಆಶ್ರಯ ಪಡೆದಿದ್ದಾನೆ. ಮಳೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಪಾಡುಪಡುತ್ತಿದ್ದ ಈತನಿಗೆ ನವೀನ್ ಎಂಬುವರು ಟಾರ್ಪಲ್ ವ್ಯವಸ್ಥೆ ಮಾಡಿದ್ದಾರೆ.

Orphan living a tarpaulin in Mangalore
ಟಾರ್ಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಅನಾಥ

By

Published : Jun 13, 2021, 11:59 AM IST

ಮಂಗಳೂರು:ನಗರದ ಬಜಾಲ್ ರೈಲ್ವೆ ಅಂಡರ್ ಪಾಸ್ ಬಳಿ ಅನಾಥನೊಬ್ಬ ಯಾವುದೇ ವ್ಯವಸ್ಥೆ ಇಲ್ಲದೆ ಟಾರ್ಪಲ್ ಅಡಿಯಲ್ಲಿಯೇ ಆಶ್ರಯ ಪಡೆದಿದ್ದಾನೆ. ಸುರಿಯುತ್ತಿರುವ ಮಳೆಯಲ್ಲಿಯೂ ಟಾರ್ಪಲ್ ಅಡಿಯಲ್ಲಿಯೇ ಇದ್ದು, ಯಾರು ಏನಾದರೂ ತಿನ್ನಲು ಕೊಟ್ಟಲ್ಲಿ ಅದನ್ನೇ ತಿಂದು ಬದಕುತ್ತಿದ್ದಾನೆ.

ಟಾರ್ಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಅನಾಥ

ಈತ ತನ್ನ ಹೆಸರು ಸ್ಯಾಮ್ರಟಾನ್ ಎಂದು ಹೇಳುತ್ತಿದ್ದು, ಹಿಂದಿ ಭಾಷೆ ಮಾತನಾಡುತ್ತಾನೆ. ನಾನು ಬೆಂಗಳೂರಿನಿಂದ ರೈಲಿನಲ್ಲಿ ಇಲ್ಲಿಗೆ ಮೂರು ತಿಂಗಳ ಹಿಂದೆ ಬಂದಿದ್ದೇನೆ ಎಂದು ಹೇಳುತ್ತಿದ್ದು, ಈತನ ಮೂಲ ನೆಲೆ ಯಾವುದು ಎನ್ನುವುದಕ್ಕೆ ಸರಿಯಾದ ಮಾಹಿತಿಯಿಲ್ಲ. ಹಾಗಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕಾಗಿದೆ.

ಮಳೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದೆ ಪಾಡುಪಡುತ್ತಿದ್ದ ಈತನಿಗೆ ನವೀನ್ ಎಂಬುವರು ಟಾರ್ಪಲ್ ವ್ಯವಸ್ಥೆ ಮಾಡಿದ್ದಾರೆ. ಟಾರ್ಪಲ್ ‌ಕಟ್ಟಿಕೊಂಡು ಅದರಡಿಯಲ್ಲಿ ಬದುಕುತ್ತಿದ್ದಾನೆ. ಆದರೆ ಜೋರು ಗಾಳಿ ಮಳೆ ಬಂದಲ್ಲಿ ಈ ಟಾರ್ಪಲ್ ಖಂಡಿತಾ ಹಾರಿ ಹೋಗಲಿದೆ‌. ಜಿಲ್ಲಾಡಳಿತ ಈತನ ಬಗ್ಗೆ ವಿಚಾರಿಸಿ ಸರಿಯಾದ ಆಶ್ರಯ ವ್ಯವಸ್ಥೆ ಮಾಡಬೇಕಿದೆ.

ABOUT THE AUTHOR

...view details