ನೆಲ್ಯಾಡಿ(ದಕ್ಷಿಣ ಕನ್ನಡ):ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದನ್ನು ಲೋಕೋಪಯೋಗಿ ಇಲಾಖೆ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡುತ್ತಿದೆ. ಈ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆದರೆ ಇಲ್ಲಿ ಕಾಂಕ್ರೀಟ್ ಮಾಡುವ ಸಮಯದಲ್ಲಿ ಮರಳನ್ನು ಗಾಳಿಸಿ ಸ್ವಚ್ಛ ಮಾಡದೇ ಹಾಗೆಯೇ ಹಾಕಲಾಗುತ್ತಿದೆ ಎನ್ನಲಾಗ್ತಿದೆ. ಬಟ್ಟೆಗಳು, ಪ್ಲಾಸ್ಟಿಕ್ ಬಾಟಲ್ ಮತ್ತು ಟಾರ್ಪಲ್ ತುಂಡುಗಳು, ಗಾಜಿನ ಬಾಟಲಿ ಚೂರುಗಳು, ಮರದ ತುಂಡುಗಳು, ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಇರುವ ಕಳಪೆ ಗುಣಮಟ್ಟದ ಮರಳನ್ನು ಇಲ್ಲಿ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಸಾಮಾಜಿಕ ಸಂಘಟನೆ ನೀತಿ ತಂಡದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಕೋಟಿಗಟ್ಟಲೆ ಹಣ ವ್ಯಯಿಸುವ ಗೋಳಿತೊಟ್ಟು ಕೊಕ್ಕಡ ರಸ್ತೆಯ ಕಾಮಗಾರಿಯಲ್ಲಿ ಕಳಪೆ ಆರೋಪ ಈ ಬಗ್ಗೆ ಮಾತನಾಡಿದ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಅವರು ಇತ್ತೀಚಿಗೆ ಬಹುತೇಕ ಎಲ್ಲಾ ಕಡೆಗಳಲ್ಲಿ ಇಲಾಖಾ ಅಧಿಕಾರಿಗಳ ಸಹಕಾರದೊಂದಿಗೆ ಕಳಪೆ ಕಾಮಗಾರಿಗಳೇ ನಡೆಯುತ್ತಿದ್ದು, ಇದನ್ನು ಜನಸಾಮಾನ್ಯರು ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನಿಸಿದರೆ ಅವರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ. ಅದನ್ನು ನಿರಾಕರಿಸಿದರೆ ಬೆದರಿಕೆ ಕರೆಗಳು ಬರುತ್ತಿವೆ. ಮಾತ್ರವಲ್ಲದೆ ಅವರ ವಿರುದ್ಧ ಕಾಮಗಾರಿಗೆ ಅಡ್ಡಿ ಸೇರಿದಂತೆ ಇತರ ಪೊಲೀಸ್ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಕಳಪೆ ಕಾಮಗಾರಿ ನಡೆದರೂ ಲೋಕೋಪಯೋಗಿ ಇಂಜಿನಿಯರ್ಗಳು ಗುತ್ತಿಗೆದಾರರ ಒಟ್ಟಿಗೆ ಸೇರಿ ಈ ಬಗ್ಗೆ ಯಾವುದೇ ತನಿಖೆಯನ್ನು ಸಹಾ ನಡೆಸುತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಲೋಕೋಪಯೋಗಿ ಇಂಜಿನಿಯರ್ ರಾಜಾರಾಮ್ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರೂ ಯಾವುದೇ ಹೇಳಿಕೆ ನೀಡಲು ಅವರು ಮುಂದಾಗಿಲ್ಲ.
ಇದನ್ನೂ ಓದಿ:ಆಗ ಒಂದ್ ಕ್ವಾರ್ಟರ್‌ಗೆ ಕಿಕ್ಕೇರ್ತಾಯಿತ್ತು.. ಈಗೇನ್‌ರೀ 2 ಕ್ವಾರ್ಟರ್‌ಗೂ ನಶೆ ಏರ್ತಿಲ್ಲ.. ಗೃಹ ಸಚಿವರಿಗೆ ಮದ್ಯ ಪ್ರಿಯನ ದೂರು..