ಮಂಗಳೂರು: ಮನಪಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೀರಿನ ಬಿಲ್ ಅನ್ನು ಆನ್ಲೈನ್ ಮೂಲಕ ಪಾವತಿಸಬಹುದು ಎಂದು ಮಂಗಳೂರು ಮನಪಾ ಉಪ ಆಯುಕ್ತ ಸಂತೋಷ್ ಕುಮಾರ್ ಹೇಳಿದರು. ಈ ಮೂಲಕ ನೀರಿನ ಶುಲ್ಕ ಪಾವತಿ ಸರಳೀಕರಣಗೊಳಿಸಲಾಗಿದೆ ಎಂದರು.
ಓದಿ:ಶಾಲೆ-ಕಾಲೇಜುಗಳು ಪುನಾರಂಭ.. ಸುಳ್ಯ, ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪರಿಶೀಲನೆ
ಮಂಗಳಾ ಸಭಾಂಗಣದಲ್ಲಿ ಇಂದು ಸಂಜೆ ಮಾತನಾಡಿದ ಅವರು, ಎಸ್ಬಿಐನ ವಿವಿಧ ವಿಧಾನಗಳನ್ನು ಅನುಸರಿಸಿ ಬಿಲ್ ಪಾವತಿಸಬಹುದು. ಎಂಪಿಡಬ್ಲ್ಯೂ ನೌಕರರು ನೀರಿನ ಬಿಲ್ ನೀಡಲು ಬಂದಾಗ ಸ್ಥಳದಲ್ಲೇ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು http://www.mangalurucity.mrc.gov.in ವೆಬ್ಸೈಟ್ ಮೂಲಕವೂ ಶುಲ್ಕ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಂಗಳೂರು ಮನಪಾ ಉಪ ಆಯುಕ್ತ ಸಂತೋಷ್ ಕುಮಾರ್ ಮನಪಾ ವ್ಯಾಪ್ತಿಯ ಉದ್ದಿಮೆದಾರರು ವ್ಯಾಪಾರ ಪರವಾನಗಿ ಪಡೆಯಲು ಆನ್ಲೈನ್ನಲ್ಲೇ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ಹೊಸ ವ್ಯಾಪಾರ ಪರವಾನಗಿಗೆ ಅರ್ಜಿ ಸಲ್ಲಿಕೆ, ಪರವಾನಗಿ ನವೀಕರಣ, ಪರವಾನಗಿ ರದ್ದುಪಡಿಸುವುದು, ದಾಖಲಾತಿಗಳನ್ನು ಹಾಗೂ ಉದ್ದಿಮೆ ಫೋಟೋ ಅಪ್ಲೋಡ್ ಮಾಡುವ ವ್ಯವಸ್ಥೆ ಇದೆ ಎಂದು ವಿವರಿಸಿದರು.
ಆನ್ಲೈನ್ ಮೂಲಕವೇ ಶುಲ್ಕ ಪಾವತಿಸುವುದು, ವ್ಯಾಪಾರ ಪರವಾನಗಿ ಅನುಮೋದನೆ, ಮುದ್ರಿಸುವುದು ಮತ್ತು ವೆಬ್ ಪೋರ್ಟಲ್ ಮೂಲಕ ಪರವಾನಗಿ ಸ್ಥಿತಿ ಪತ್ತೆ ಹಚ್ಚುವುದು, ಪ್ರತಿ ಉದ್ದಿಮೆಯನ್ನು ಗುರುತಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಹೀಗೆ ಹಲವು ವ್ಯವಸ್ಥೆಗಳನ್ನು ಒದಗಿಸಲಾಗಿದೆ ಎಂದರು.