ಕರ್ನಾಟಕ

karnataka

ETV Bharat / state

ಮೇ 10ರಿಂದ ಮಂಗಳೂರು ವಿವಿಯ ಪದವಿ ವಿದ್ಯಾರ್ಥಿಗಳಿಗೆ ಆನ್​​ಲೈನ್ ಕ್ಲಾಸ್ - ಪದವಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ

ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕ‌ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಮೇ 10ರಿಂದ ಆರಂಭವಾಗಲಿದೆ..

manglore
manglore

By

Published : May 4, 2021, 6:43 PM IST

ಮಂಗಳೂರು : ಮೇ 10 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರುಗಳ‌ ಆನ್‌ಲೈನ್ ಸಭೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕ‌ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಮೇ 10ರಿಂದ ಆರಂಭವಾಗಲಿದೆ.

ಉಳಿದಿರುವಂತೆ ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳು ಮತ್ತು ಭೌತಿಕ ತರಗತಿಗಳ ದಿನಾಂಕವನ್ನು ಸರಕಾರದ ಅನುಮತಿ ಬಳಿಕ ಪ್ರಕಟಿಸಲು ಸಭೆ ನಿರ್ಧರಿಸಿದೆ.

ABOUT THE AUTHOR

...view details