ಕರ್ನಾಟಕ

karnataka

ETV Bharat / state

ವರದಿಗಾಗಿ ಕಾದು ವೃದ್ಧೆಯ ಮೃತದೇಹ ದಿನವಿಡೀ ಮನೆಯಲ್ಲಿರಿಸಿದ ಕುಟುಂಬ!! - ವೆನ್ಲಾಕ್ ಆಸ್ಪತ್ರೆ ಮಂಗಳೂರು

ವೃದ್ಧೆಯನ್ನು ಜುಲೈ 8 ರಂದು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ಗಂಟಲ ದ್ರವದ ಮಾದರಿ ಒದಗಿಸಿ ಮನೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ಅಸ್ವಸ್ಥರಾಗಿದ್ದ ಆ ವೃದ್ಧೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೇ ಜು.9ರಂದು ಸಂಜೆಯ ವೇಳೆಗೆ ಮೃತಪಟ್ಟಿದ್ದಾರೆ. ಆದರೆ, ಕೋವಿಡ್ ವರದಿ ಬಾರದ ಪರಿಣಾಮ ಜು.10ರ ಸಂಜೆಯವರೆಗೆ ಕುಟುಂಬ ಮೃತದೇಹವನ್ನು ಮನೆಯಲ್ಲಿ ಇರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು.

Mangalore
ಮಂಗಳೂರು

By

Published : Jul 11, 2020, 7:44 AM IST

Updated : Jul 11, 2020, 9:02 AM IST

ಮಂಗಳೂರು: ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಲೇ ಇದೆ. ಮಂಗಳೂರಿನಲ್ಲೊಂದು ಮನಕಲುಕುವ ಸನ್ನಿವೇಶ ನಡೆದಿದ್ದು, ಮೃತ ವೃದ್ಧೆಯೊಬ್ಬರ ಕೊರೊನಾ ಸೋಂಕಿನ ವರದಿಗಾಗಿ ಕುಟುಂಬವೊಂದು ಒಂದು‌ ದಿನ ಮೃತದೇಹವನ್ನು ಮನೆಯಲ್ಲಿಯೇ ಇರಿಸಿಕೊಂಡ ಘಟನೆ ನಡೆದಿದೆ.

ನಗರದ ಸುರತ್ಕಲ್​ನ ಕೃಷ್ಣಾಪುರದ 75 ವರ್ಷದ ವೃದ್ಧೆಯೊಬ್ಬರು ಹಲವಾರು ವರ್ಷಗಳಿಂದ ವಾತದ ಸಮಸ್ಯೆಯಿಂದ ಬಳಲುತ್ತಿದ್ದರು‌. ಇದಕ್ಕಾಗಿ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಹಳಷ್ಟು ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರಿಗೆ ಮತ್ತೆ ಆರೋಗ್ಯ ಸಮಸ್ಯೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮತ್ತೆ ಅದೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಲಾಗಿತ್ತು. ಆದರೆ, ಈ ಬಾರಿ ಆಸ್ಪತ್ರೆಗೆ ಹೋದಾಗ ಕೋವಿಡ್-19 ಸೋಂಕು ತಪಾಸಣೆ ವರದಿ ತರುವಂತೆ ಹಿಂದಕ್ಕೆ ಕಳುಹಿಸಲಾಯಿತು ಎನ್ನಲಾಗಿದೆ.

ಅದರಂತೆ ಮನೆಯವರು ವೃದ್ಧೆಯನ್ನು ಜುಲೈ 8 ರಂದು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ಗಂಟಲ ದ್ರವದ ಮಾದರಿಯನ್ನು ಒದಗಿಸಿ ಮನೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ಅಸ್ವಸ್ಥರಾಗಿದ್ದ ಆ ವೃದ್ಧೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೇ ಜು.9ರಂದು ಸಂಜೆಯ ವೇಳೆಗೆ ಮೃತಪಟ್ಟಿದ್ದಾರೆ. ಆದರೆ ಕೋವಿಡ್ ವರದಿ ಬಾರದ ಪರಿಣಾಮ ಜು.10ರ ಸಂಜೆಯವರೆಗೆ ಕುಟುಂಬ ಮೃತದೇಹವನ್ನು ಮನೆಯಲ್ಲಿ ಇರಿಸಬೇಕಾಯಿತು.

ಒಂದೆಡೆ ಮನೆಯಲ್ಲಿ ಮೃತದೇಹವನ್ನು ಇರಿಸಿಕೊಂಡು ಕಾದಂತೆ ಸೋಂಕಿನ ವರದಿಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿನ್ನೆ ಸಂಜೆಯವರೆಗೆ ಕುಟುಂಬಸ್ಥರು ಕಾಯಬೇಕಾಯಿತು. ಇಂದು 6 ಗಂಟೆಯ ಸುಮಾರಿಗೆ ತಪಾಸಣಾ ವರದಿ ಬಂದಿದ್ದು, ಮೃತ ವೃದ್ಧೆಗೆ ಸೋಂಕು ದೃಢಗೊಂಡಿತ್ತು. ಆದರೆ, ವೃದ್ಧೆಯ ಮನೆಯಲ್ಲಿ ಯಾರೂ ಕೊರೊನಾ ಸೋಂಕಿತರಿಲ್ಲ. ಯಾರೂ ಕ್ವಾರೆಂಟೈನ್​ನಲ್ಲೂ ಇಲ್ಲ. ನೆರೆಹೊರೆಯಲ್ಲಿಯೂ ಯಾರಲ್ಲೂ ಕೊರೊನಾ ಪ್ರಕರಣಗಳಿಲ್ಲ. ಆ ವೃದ್ಧೆಯೂ ಎಲ್ಲಿಗೂ ಹೋಗಿಲ್ಲ. ಆದರೂ ಮೃತ ವೃದ್ಧೆಗೆ ಸೋಂಕು ದೃಢಗೊಂಡಿರುವುದು ಮನೆಯವರಲ್ಲಿ ಭೀತಿಯನ್ನುಂಟು ಮಾಡಿದೆ.

Last Updated : Jul 11, 2020, 9:02 AM IST

ABOUT THE AUTHOR

...view details