ಪುತ್ತೂರು:ಪುತ್ತೂರು ನಗರಸಭೆ ಸದಸ್ಯೆಯ ಮನೆಯಲ್ಲೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ನಗರಸಭೆ ಸದಸ್ಯೆಯ ಮಾವ ವಾರದ ಹಿಂದೆ ಜ್ವರದ ಕಾರಣಕ್ಕಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಔಷಧಿಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಗಂಟಲು ಪರೀಕ್ಷೆಯ ವರದಿ ಸಂಗ್ರಹಿಸಲು ಆಸ್ಪತ್ರೆಗೆ ಮನೆ ಮಂದಿ ಬಂದಾಗ ಕೊರೊನಾ ಪಾಸಿಟಿವ್ ಇರುವ ವಿಚಾರವನ್ನು ತಿಳಿಸಲಾಗಿದೆ.