ಕರ್ನಾಟಕ

karnataka

ETV Bharat / state

ಉಳ್ಳಾಲ: ಸಮುದ್ರದಲ್ಲಿ ಈಜಲು ಹೋಗಿ ಓರ್ವ ಸಾವು, ಮತ್ತೋರ್ವ ನಾಪತ್ತೆ - One goes missing

ಸಮುದ್ರದಲೆಯಲ್ಲಿ ಸಿಲುಕಿ ಮುಳುಗುತ್ತಿದ್ದ ಮೂವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

One goes missing, one dies, one rescued
ಸಮುದ್ರದಲ್ಲಿ ಈಜಲು ಹೋಗಿ ಓರ್ವ ನಾಪತ್ತೆ, ಒಬ್ಬ ಸಾವು, ಇನ್ನೋರ್ವ ರಕ್ಷಣೆ

By ETV Bharat Karnataka Team

Published : Dec 29, 2023, 6:45 PM IST

ಉಳ್ಳಾಲ: ದರ್ಗಾ ಭೇಟಿಗೆಂದು ಬಂದಿದ್ದ ಮೂವರು ಯುವಕರ ಪೈಕಿ ಓರ್ವ ಸಮುದ್ರದಲೆಗಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಇಬ್ಬರನ್ನು ರಕ್ಷಿಸಲಾಗಿದೆ. ಇನ್ನೋರ್ವ ನಾಪತ್ತೆಯಾಗಿದ್ದಾನೆ.

ಚಿಕ್ಕಮಗಳೂರು ನಿವಾಸಿಗಳಾದ ಬಶೀರ್ (23), ಸಲ್ಮಾನ್ (19), ಸೈಫ್ ಆಲಿ (27) ಉಳ್ಳಾಲ ದರ್ಗಾಕ್ಕೆಂದು ಬಂದಿದ್ದರು. ಈ ಸಂದರ್ಭದಲ್ಲಿ ಸಮುದ್ರ ತೀರಕ್ಕೆ ತೆರಳಿದ್ದಾರೆ. ನೀರಿನಲ್ಲಿ ಆಟವಾಡುತ್ತಿದ್ದಾಗ ಮೂವರೂ ಅಲೆಗಳ ನಡುವೆ ಸಿಲುಕಿದ್ದರು.

ತಕ್ಷಣ ಸ್ಥಳದಲ್ಲಿದ್ದ ಮೊಗವೀರ ಜೀವರಕ್ಷಕ ಸದಸ್ಯರು ಧುಮುಕಿ ಸೈಫ್ ಆಲಿ ಮತ್ತು ಸಲ್ಮಾನ್ ಇಬ್ಬರನ್ನು ಮೇಲಕ್ಕೆತ್ತಿದ್ದಾರೆ. ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಶೀರ್ ಪತ್ತೆಯಾಗಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ABOUT THE AUTHOR

...view details