ಪುತ್ತೂರು:ನೆಹರುನಗರದಲ್ಲಿ ವಾಸಿಸುತ್ತಿದ್ದ 80 ವರ್ಷದ ವೃದ್ಧೆ ಇಂದು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಪುತ್ತೂರಿನಲ್ಲಿ ಕೊರೊನಾ ಸೋಂಕಿಗೆ 80 ವರ್ಷದ ವೃದ್ಧೆ ಬಲಿ - Puttur corona news
ನೆಹರುನಗರದಲ್ಲಿ ವಾಸಿಸುತ್ತಿದ್ದ 80 ವರ್ಷದ ವೃದ್ಧೆ ಇಂದು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
![ಪುತ್ತೂರಿನಲ್ಲಿ ಕೊರೊನಾ ಸೋಂಕಿಗೆ 80 ವರ್ಷದ ವೃದ್ಧೆ ಬಲಿ Puttur corona case](https://etvbharatimages.akamaized.net/etvbharat/prod-images/768-512-05:31:50:1595073710-kn-mng-01-korona-death-puttur-script-kac10010-18072020132654-1807f-1595059014-711.jpg)
Puttur corona case
ಇವರು ನೆಹರುನಗರದಲ್ಲಿ ತನ್ನ ಮಗನೊಂದಿಗೆ ವಾಸಿಸುತ್ತಿದ್ದರು. ಅನಾರೋಗ್ಯದ ನಿಮಿತ್ತ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆ ವೇಳೆ ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜು.17ರಂದು ಸಂಜೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಇವರು ಬಂಟ್ವಾಳ ತಾಲೂಕಿನ ಪುಣಚದ ಅಜ್ಜಿನಡ್ಕ ನಿವಾಸಿ. ಇನ್ನೂ ಪುಣಚ ಪೆರಿಯಲತಡ್ಕದ ಜಮಾಅತ್‌ಗೆ ಸಂಬಂಧಪಟ್ಟ ಜಮೀನಿನಲ್ಲಿ ಮೃತರ ದಫನ ಕಾರ್ಯ ನಡೆಯಲಿದೆ.