ಕರ್ನಾಟಕ

karnataka

ETV Bharat / state

ಪುತ್ತೂರಿನಲ್ಲಿ ಓರ್ವನಿಗೆ ಕೊರೊನಾ: ಚಿಕಿತ್ಸೆ ನೀಡ್ತಿದ್ದವರೂ ಸೇರಿ 12 ಮಂದಿ ಹೋಂ ಕ್ವಾರಂಟೈನ್ - Puttur Govt. Hospital

ಮಾ.27ರಂದು ಸಂಜೆ ವೇಳೆಗೆ ವ್ಯಕ್ತಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತನಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ವೈದ್ಯರು, ಆರು ಮಂದಿ ದಾದಿಯರು ಹಾಗೂ ಕೊಠಡಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ 4 ಮಂದಿಯನ್ನು ಹೋಂ ಕ್ವಾರಂಟೈನ್​ನಲ್ಲಿರುವಂತೆ ತಿಳಿಸಲಾಗಿದೆ.

Home Quaraintine
ಪುತ್ತೂರು ತಾಲೂಕಿನ ಸರ್ಕಾರಿ ಆಸ್ಪತ್ರೆ

By

Published : Mar 29, 2020, 5:48 PM IST

ಮಂಗಳೂರು :ಪುತ್ತೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯ ಐಸೋಲೇಶನ್​ ವಾರ್ಡ್​ನಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ 12 ಮಂದಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಪುತ್ತೂರಿನ ಸರ್ಕಾರಿತಾಲೂಕು ಆಸ್ಪತ್ರೆ..

ಮಾ.27ರಂದು ಸಂಜೆ ವೇಳೆಗೆ ವ್ಯಕ್ತಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತನಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ವೈದ್ಯರು, ಆರು ಮಂದಿ ದಾದಿಯರು ಹಾಗೂ ಕೊಠಡಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ 4 ಮಂದಿಯನ್ನು ಹೋಂ ಕ್ವಾರೆಂಟೈನ್​ನಲ್ಲಿರುವಂತೆ ತಿಳಿಸಲಾಗಿದೆ.

ಮಾ.21ರಂದು ದುಬೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ, ಬಳಿಕ ಬಿಎಂಟಿಸಿ ಬಸ್​ನಲ್ಲಿ ಮೆಜೆಸ್ಟಿಕ್​ಗೆ ತೆರಳಿ ಅಲ್ಲಿಂದ ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಉಪ್ಪಿನಂಗಡಿಗೆ ಬಂದಿದ್ದಾನೆ. ಬಳಿಕ ರಿಕ್ಷಾ ಮೂಲಕ ತನ್ನ ಮನೆ ಕಲ್ಲೇರಿಗೆ ತೆರಳಿರುವುದಾಗಿ ತಿಳಿದು ಬಂದಿದೆ.

ABOUT THE AUTHOR

...view details