ಬೆಳ್ತಂಗಡಿ :ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಅಡಿಕೆ ಅಂಗಡಿಯಿಂದ ಕಳೆದ ಸೆ. 30ರಂದು ಅಡಿಕೆ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಡಿಕೆ ಕಳ್ಳತನ ಪ್ರಕರಣ : ಆರೋಪಿ ಬಂಧಿಸಿದ ಧರ್ಮಸ್ಥಳ ಪೊಲೀಸರು - ಕಾಯರ್ತಡ್ಕ ಅಡಿಕೆ ಕಳ್ಳತನ ಪ್ರಕರಣ
ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಬಂಟ್ವಾಳದ ನಿವಾಸಿಯೊಬ್ಬರ ಅಡಿಕೆ ಅಂಗಡಿಯ ಬೀಗ ಮುರಿದು 85 ಕೆ.ಜಿ. ತೂಕದ ಸುಮಾರು 1.50 ಲಕ್ಷ ಮೌಲ್ಯದ ಅಡಿಕೆ ಕಳ್ಳತನವಾಗಿತ್ತು.
ಅಡಿಕೆ ಕಳ್ಳತನ ಪ್ರಕರಣ
ರೆಖ್ಯ ಗ್ರಾಮದ ವಿನೋದ್ ಬಂಧಿತ ಆರೋಪಿ. ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಬಂಟ್ವಾಳದ ನಿವಾಸಿಯೊಬ್ಬರ ಅಡಿಕೆ ಅಂಗಡಿಯ ಬೀಗ ಮುರಿದು 85 ಕೆ.ಜಿ. ತೂಕದ ಸುಮಾರು 1.50 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನವಾಗಿತ್ತು. ಮತ್ತೊಂದೆಡೆ ಕಡಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 2 ಲಕ್ಷ ರೂ. ಮೌಲ್ಯದ 4 ಕ್ವಿಂಟಾಲ್ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಜೀಪನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವದಲ್ಲಿ ಧರ್ಮಸ್ಥಳ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Last Updated : Oct 11, 2020, 6:21 AM IST