ಉಪ್ಪಿನಂಗಡಿ: ದೃಷ್ಟಿದೋಷ ಹೊಂದಿದ್ದರು ಎನ್ನಲಾದ ವೃದ್ಧೆಯೊಬ್ಬರು ನೀರೆಂದು ಪೆಟ್ರೋಲ್ ಕುಡಿದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ನಡೆದಿದೆ.
ಬಂಟ್ವಾಳ ನಿವಾಸಿ ಪದ್ಮಾವತಿ (79) ಎಂಬುವರು ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿಯಲ್ಲಿರುವ ಮಗಳ ಮನೆಗೆ ಬಂದಿದ್ದಾಗ ಘಟನೆ ನಡೆದಿದೆ. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ತಂದಿರಿಸಿದ್ದ ಪೆಟ್ರೋಲ್ ಅನ್ನು ವೃದ್ಧೆ ಸೆ. 26 ರಂದು ಸೇವಿಸಿದ್ದರು.