ಮಂಗಳೂರು: ತೌಕ್ತೆ ಚಂಡಮಾರುತದ ಪ್ರಭಾವಕ್ಕೆ ಮಂಗಳೂರಿನ ಸಮುದ್ರ ತೀರದಲ್ಲಿ ಹಲವೆಡೆ ಹಾನಿಯಾಗಿದೆ. ಮಂಗಳೂರಿನ ಸಮುದ್ರ ತೀರದಲ್ಲಿ ಕಡಲಿನ ಅಲೆಗಳ ಆರ್ಭಟ ಹೆಚ್ಚಿದ್ದು ಸಸಿಹಿತ್ಲುವಿನ ನಂದಿನಿ ಶಾಂಭವಿ ನದಿ ಸಂಗಮವಾಗುವ ಬಳಿ ಇದ್ದ ಹಳೆ ಅಂಗಡಿಯೊಂದು ಸಮುದ್ರ ಪಾಲಾಗಿದೆ.
ತೌಕ್ತೆ ಚಂಡಮಾರುತ ಅಬ್ಬರ: ಸಸಿ ಹಿತ್ಲುವಿನಲ್ಲಿ ಹಳೆ ಅಂಗಡಿ ಸಮುದ್ರಪಾಲು, ಮನೆಗಳಿಗೆ ನುಗ್ಗಿದ ನೀರು
ಮಂಗಳೂರು ಅರಬ್ಬಿ ಸಮುದ್ರ ತೀರದಲ್ಲಿ ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಸಮುದ್ರದ ಅಬ್ಬರದ ಅಲೆಗೆ ಕೆಲವೆಡೆ ಹಾನಿಯಾಗಿದೆ. ಅಲ್ಲದೇ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟಕ್ಕೀಡಾಗಿದ್ದಾರೆ.
ತೌಕ್ತೆ ಚಂಡಮಾರುತ ಅಬ್ಬರ
ಇನ್ನೂ ದ್ವೀಪದ ರೀತಿಯಲ್ಲಿ ಇರುವ ಉಚ್ಚಿಲಕುದ್ರು ಎಂಬಲ್ಲಿ ನೆರೆ ನೀರು ಹೆಚ್ಚಳವಾಗಿದ್ದು ಇಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಮಂಗಳೂರು ಅರಬ್ಬಿ ಸಮುದ್ರ ತೀರದಲ್ಲಿ ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು ಸಮುದ್ರದ ಅಬ್ಬರದ ಅಲೆಗೆ ಕೆಲವೆಡೆ ಹಾನಿಯಾಗಿದೆ.