ಕರ್ನಾಟಕ

karnataka

ETV Bharat / state

ನಮ್ಮ ಅವಧಿಯಲ್ಲೇ 'ತುಳು'ವಿಗೆ ಅಧಿಕೃತ ರಾಜ್ಯಭಾಷೆಯ ಮಾನ್ಯತೆ: ನಳಿನ್​​ ಕುಮಾರ್ - #TuluOfficialinKA_KL Campaign

‘ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯಂತೆ ಮಡಿಲಲ್ಲಿ ಕೂರಿಸಿ ಜೋಗುಳ ಹಾಡಿದ ತಾಯಿ ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲ ಖಂಡಿತ ಇದೆ. ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ’ - ನಳಿನ್ ಕುಮಾರ್ ಕಟೀಲು

Nalin Kumar
ನಳಿನ್​​ ಕುಮಾರ್

By

Published : Jun 13, 2021, 10:42 PM IST

ಮಂಗಳೂರು: ಒಂದಷ್ಟು ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ನಮ್ಮ ಅವಧಿಯಲ್ಲಿಯೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಮಾನ್ಯತೆ ನೀಡುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ‌.

ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು ಸರ್ಕಾರದ ಗಮನಸೆಳೆಯಲು #TuluOfficialinKA_KL ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ 'ಟ್ವೀಟ್ ತುಳುನಾಡು' ಟ್ವಿಟರ್ ಅಭಿಯಾನವು ಭಾನುವಾರ ಬೆಳಗ್ಗೆ 6 ರಿಂದ ರಾತ್ರಿ 11.59 ಗಂಟೆಯವರೆಗೆ ನಡೆಯುತ್ತಿದೆ.

ಈ ಹ್ಯಾಶ್ ಟ್ಯಾಗ್ ನಡಿಯಲ್ಲಿಯೇ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲು 'ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯಂತೆ ಮಡಿಲಲ್ಲಿ ಕೂರಿಸಿ ಜೋಗುಳ ಹಾಡಿದ ತಾಯಿ ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲ ಖಂಡಿತ ಇದೆ. ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details