ಬಂಟ್ವಾಳ (ದ.ಕ.): ಕರ್ನಾಟಕದ ಕಡೆಯಿಂದ ಯಾವುದೇ ವಾಹನ ಸಂಚಾರ ಇಲ್ಲದ ಸಂದರ್ಭದಲ್ಲಿಯೂ ಕೇರಳದಿಂದ ವಾಹನಗಳು ಚೆಕ್ ಪೋಸ್ಟ್‌ವರೆಗೆ ಬರುತ್ತಲೇ ಇವೆ. ಈ ಬಗ್ಗೆ ಕೇರಳ ಪೊಲೀಸರನ್ನು ಪ್ರಶ್ನಿಸಿದರೆ, ಕರ್ನಾಟಕದಿಂದಲೇ ವಾಹನ ಬರುತ್ತದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಕರ್ನಾಟಕ-ಕೇರಳ ಗಡಿ ಭಾಗದ ವಾಹನ ತಡೆಯಲು ಅಧಿಕಾರಿಗಳ ಹೊಸ ಪ್ಲಾನ್
ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಕೇರಳ ಪೊಲೀಸರ ಅಸಹಕಾರದಿಂದ ಕರ್ನಾಟಕಕ್ಕೆ ನುಗ್ಗುತ್ತಿರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ಎಲ್ಲಾ ಒಳ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಯಿತು.
ಕರ್ನಾಟಕ -ಕೇರಳ ಗಡಿ ಭಾಗದ ವಾಹನ ತಡೆಯಲು ಅಧಿಕಾರಿಗಳ ಹೊಸ ಪ್ಲಾನ್
ಕೇರಳದಲ್ಲಿ ಪ್ರಕರಣಗಳು ನಿತ್ಯ ಹೆಚ್ಚಾಗುತ್ತಿದ್ದರೂ, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ ಉಡಾಫೆತನ ತೋರುತ್ತಿರುವುದು ಗಡಿ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಲೆಕ್ಕಿ, ಮಲಾರು, ಶಾಂತಿಮೂಲೆ ಮೂಲಕ ಕೇರಳ ಸಂಪರ್ಕಿಸುವ ಒಳ ರಸ್ತೆಗಳನ್ನು ಪೊಲೀಸರು ಹಾಗೂ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಮುಚ್ಚುವ ಕಾರ್ಯ ನಡೆಸಿದರು.
ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿ, ಹಾಲು, ಔಷಧಿ ಅಂಗಡಿಗಳು ತೆರೆದಿದ್ದರೆ, ಬಳಿಕ ಸಂಪೂರ್ಣ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.