ಮಂಗಳೂರು:ತಮ್ಮವರೆನ್ನಲು ಯಾರೂ ಇಲ್ಲದೆ ಮಳೆಗೆ ಟಾರ್ಪಲ್ ಮೂಲಕ ಆಶ್ರಯ ಪಡೆದು ನಗರದ ರಸ್ತೆ ಬದಿ ಕುಳಿತಿದ್ದ ವ್ಯಕ್ತಿಯ ಬಗ್ಗೆ ಪ್ರಕಟಿಸಲಾದ ವರದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷಣ ಪ್ರತಿಕ್ರಿಯಿಸಿದೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ನಿನ್ನೆ (ಜೂನ್ 13 ರಂದು) ಈಟಿವಿ ಭಾರತ್ ಪ್ರತಿನಿಧಿ ವರದಿ ಮಾಡಲು ತೆರಳುವಾಗ ನಗರದ ಬಜಾಲ್ ರೈಲ್ವೆ ಅಂಡರ್ ಪಾಸ್ ಬಳಿ ಸತತವಾಗಿ ಸುರಿಯುತ್ತಿದ್ದ ಮಳೆಯ ಮಧ್ಯೆ ವ್ಯಕ್ತಿಯೊಬ್ಬ ಯಾವುದೇ ವ್ಯವಸ್ಥೆಗಳಿಲ್ಲದೆ ಟಾರ್ಪಲ್ ಅಡಿಯಲ್ಲಿ ಆಶ್ರಯ ಪಡೆಯುತ್ತಿದ್ದ. ಈ ಬಗ್ಗೆ 'ಸುರಿಯುವ ಮಳೆಯಲ್ಲಿ ಟಾರ್ಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಅನಾಥ'ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.