ಮಂಗಳೂರು (ದ.ಕ): ಮಂಗಳೂರಿನಲ್ಲಿ ಉಗ್ರ ಸಂಘಟನೆಯ ಪರ ಗೋಡೆ ಬರಹ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಗೋಡೆಯ ಮೇಲೆ ಉಗ್ರ ಸಂಘಟನೆ ಹೆಸರಲ್ಲಿ ಆಕ್ಷೇಪಾರ್ಹ ಬರಹ - lashkare -e- toiba
ಮಂಗಳೂರಲ್ಲಿ ಆಕ್ಷೇಪಾರ್ಹ ಗೋಡೆ ಬರಹವೊಂದು ಸದ್ದು ಮಾಡಿದೆ. ಕದ್ರಿ ಪೊಲೀಸ್ ಠಾಣೆಯ ಸ್ವಲ್ಪ ದೂರದಲ್ಲೇ ಗೋಡೆ ಮೇಲೆ ಆಕ್ಷೇಪಾರ್ಹವಾದ ಬರಹ ಬರೆಯಲಾಗಿದೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗೋಡೆಯ ಮೇಲೆ ಉಗ್ರ ಸಂಘಟನೆ ಹೆಸರಲ್ಲಿ ಆಕ್ಷೇಪಾರ್ಹ ಬರಹ
ನಗರದ ಕದ್ರಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಕಿಡಿಗೇಡಿಗಳು ಗೋಡೆ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆದಿದ್ದಾರೆ. Do Not force us to unite lashkare -e- toiba and Taliban to deal with sanghis and mannefis #lashkare Zindabad ಎಂದು ಬರೆಯಲಾಗಿದೆ.
ಇಂತಹ ಬರಹ ಕಂಡುಬಂದ ತಕ್ಷಣವೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ತನಿಖೆ ಮುಂದುವರಿದಿದೆ.