ಮಂಗಳೂರು: ಮಂಗಳೂರು ವಿವಿಯ ವಿವಿಧ ಕಾಲೇಜುಗಳ ಪ್ರೊಫೆಸರ್ಗಳು ಹಾಗೂ ಉಪನ್ಯಾಸಕರನ್ನು ಒಳಗೊಂಡ ಟೆಲಿಗ್ರಾಂ ಗ್ರೂಪಿನಲ್ಲಿ ಕೊಡಗು ಮೂಲದ ಪ್ರೊಫೆಸರ್ ಒಬ್ಬರು ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಈ ಸಂಬಂಧ ವಿವಿಯು ಸೈಬರ್ ಠಾಣೆಗೆ ದೂರು ನೀಡಲಾಗಿದೆ.
ಮಂಗಳೂರು ವಿವಿ ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಈ ಟೆಲಿಗ್ರಾಂ ಗ್ರೂಪ್ ರಚಿಸಲಾಗಿತ್ತು. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರಿದ್ದರು. ಆದರೆ ಗ್ರೂಪಿನಲ್ಲಿ ಕೊಡಗು ಮೂಲದ ಇಂಗ್ಲೀಷ್ ಪ್ರೊಫೆಸರ್ ಬುಧವಾರ ಸಂಜೆ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.