ಮಂಗಳೂರು: ನಗರದ ಕದ್ರಿ ಬಟ್ಟಗುಡ್ಡೆಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡ ಉಗ್ರ ಬರಹದ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆ ಬರಹ ಇಲ್ಲಿನ ಕೋರ್ಟ್ ಬಳಿ ಕಾಣಿಸಿಕೊಂಡಿದೆ.
ಮಂಗಳೂರು ಕೋರ್ಟ್ ಬಳಿ ಗೋಡೆಯ ಮೇಲೆ ಮತ್ತೊಂದು ಎಚ್ಚರಿಕೆ ಬರಹ! - ಕದ್ರಿಯಲ್ಲಿ ಕಾಣಿಸಿಕೊಂಡ ಉಗ್ರಬರಹದ ಬೆನ್ನಿಗೆ ಕೋರ್ಟ್ ಬಳಿ ಕಾಣಿಸಿಕೊಂಡ ಮತ್ತೊಂದು ಎಚ್ಚರಿಕೆ ಬರಹ
ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಕೋರ್ಟ್ ಬಳಿಯ ಹಳೆಯ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯಲ್ಲಿ ಇದನ್ನು ಬರೆಯಲಾಗಿದೆ. ಇದರಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ವಿಷಯ ಇಲ್ಲವಾದರೂ, ಕದ್ರಿಯಲ್ಲಿ ಬರೆದಿರುವ ತಂಡವೇ ಇದನ್ನು ಬರೆದಿರಬಹುದೆಂದು ಶಂಕಿಸಲಾಗಿದೆ.
ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಕೋರ್ಟ್ ಬಳಿಯ ಹಳೆಯ ಪೊಲೀಸ್ ಔಟ್ ಪೋಸ್ಟ್ ನ ಗೋಡೆ ಯಲ್ಲಿ ಇದನ್ನು ಬರೆಯಲಾಗಿದೆ. ಇದರಲ್ಲಿ ಭಯೋತ್ಪಾದಕರು ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ವಿಷಯ ಇಲ್ಲವಾದರೂ ಕದ್ರಿಯಲ್ಲಿ ಬರೆದಿರುವ ತಂಡವೇ ಇದನ್ನು ಬರೆದಿರಬಹುದೆಂದು ಶಂಕಿಸಲಾಗಿದೆ. ಇಲ್ಲಿ ಬರಹವನ್ನು ಉರ್ದು ಭಾಷೆಯ ಪದಗಳನ್ನು, ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ.
ನವೆಂಬರ್ 27 ರಂದು ಕದ್ರಿ ಬಟ್ಟಗುಡ್ಡೆಯಲ್ಲಿ ಲಷ್ಕರ್ ಜಿಂದಾಬಾದ್ ಎಂದು ಗೋಡೆ ಬರಹ ಬರೆಯಲಾಗಿತ್ತು. ಇದರ ಮರುದಿನ ಕೋರ್ಟ್ ಬಳಿಯ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಈ ಬರಹ ಪತ್ತೆಯಾಗಿದೆ. ಇವೆರಡು ಕೃತ್ಯವನ್ನು ಒಂದೇ ತಂಡ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದೀಗ ಈ ಬರಹವನ್ನು ಅಳಿಸಿ ಹಾಕಲಾಗಿದ್ದು, ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.