ಮಂಗಳೂರು :ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಇತ್ತೀಚೆಗೆ ಪೋಕ್ಸೋ ಪ್ರಕರಣದ ಆರೋಪಿ ಸೇರಿದಂತೆ ಎರಡು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆ ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ಇಂದು ತಡೆಬೇಲಿಯ ಅಳವಡಿಸುವ ಕಾರ್ಯ ಆರಂಭವಾಗಿದೆ.
ನ್ಯಾಯಾಲಯ ಸಂಕೀರ್ಣದೊಳಗಡೆಯೇ ಇಬ್ಬರು ವಿಚಾರಣಾಧೀನ ಕೈದಿಗಳು ಬೆಂಗಾವಲು ಪೊಲೀಸರ ಕಣ್ಣು ತಪ್ಪಿಸಿ ಕೋರ್ಟ್ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆರು ಮಹಡಿಗಳ ತೆರೆದ ಪ್ರದೇಶಗಳನ್ನು ಸಂಪೂರ್ಣ ಮುಚ್ಚುವ ವ್ಯವಸ್ಥೆಗಾಗಿ ನೈಲಾನ್ ಬಲೆಯ ತಡೆ ಬೇಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ.