ಕರ್ನಾಟಕ

karnataka

ETV Bharat / state

ಒಂದೂ ಕೊರೊನಾ ಪ್ರಕರಣವಿಲ್ಲ.. ದ.ಕ. ಜಿಲ್ಲೆಯಲ್ಲಿದೆ ಈ ಗ್ರಾಮ ! - ದಕ್ಷಿಣ ಕನ್ನಡ ಜಿಲ್ಲೆಯ ಸಿರಿಬಾಗಿಲು ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ

ಕಡಬ ತಾಲೂಕಿಗೆ ಒಳಪಡುವ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಸಿರಿಬಾಗಿಲು ಗ್ರಾಮದಲ್ಲಿ 165 ಕುಟುಂಬಗಳು ಮತ್ತು ಸುಮಾರು 872 ಜನಸಂಖ್ಯೆ ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

Not a single Corona case has been reported in this village in Dakshina Kannada district
ಈ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ

By

Published : Jun 9, 2021, 12:36 PM IST

ಸುಬ್ರಹ್ಮಣ್ಯ :ಕೊರೊನಾ ಎರಡನೇ ಅಲೆಯು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದರೂ, ದಕ್ಷಿಣ ಕನ್ನಡ ಜಿಲ್ಲೆಯ ಈ ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.

ಕಡಬ ತಾಲೂಕಿಗೆ ಒಳಪಡುವ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಸಿರಿಬಾಗಿಲು ಗ್ರಾಮದಲ್ಲಿ 165 ಕುಟುಂಬಗಳು ಮತ್ತು ಸುಮಾರು 872 ಜನಸಂಖ್ಯೆ ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

ಈ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ

ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ ಎಂದ ಮಾತ್ರಕ್ಕೆ ಈ ಗ್ರಾಮದ ಜನತೆ ಹೊರಗಡೆ ಪಟ್ಟಣಗಳನ್ನು ಆಶ್ರಯಿಸಿಲ್ಲ ಅಥವಾ ಟೆಸ್ಟ್ ಮಾಡಿಸಿಲ್ಲ ಎಂದು ಅರ್ಥವಲ್ಲ. ಇವರು ತಮ್ಮ ದೈನಂದಿನ ಅಗತ್ಯಗಳಿಗೆ, ಆಸ್ಪತ್ರೆಯ ಅಗತ್ಯಗಳಿಗೆ ಆಶ್ರಯಿಸಿರುವುದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರುವ ಪಟ್ಟಣ ಪ್ರದೇಶಗಳನ್ನೇ. ಈ ಗ್ರಾಮದ ಸಾಮಾನ್ಯ ಎಲ್ಲಾ ಜನರೂ ಕೊರೊನಾ ತಪಾಸಣೆ ಮಾಡಿಸಿದ್ದಾರೆ. ಆದರೆ ವರದಿ ಮಾತ್ರ ನೆಗೆಟಿವ್.

ಮಾತ್ರವಲ್ಲದೆ ತಮ್ಮ ಗ್ರಾಮ ಪಂಚಾಯತ್ ಕಚೇರಿ ಇರುವ ಪಕ್ಕದ ಕೊಂಬಾರು ಗ್ರಾಮದಲ್ಲೂ ಹಲವರಿಗೆ ಕೊರೊನಾ ಸೋಂಕು ತಗುಲಿದೆ. ಆದರೆ ಸಿರಿಬಾಗಿಲು ಗ್ರಾಮದಲ್ಲಿ ಕೊರೊನಾ ತಗುಲಿಲ್ಲ, ಇದಕ್ಕೆ ಕಾರಣ ಈ ಗ್ರಾಮದ ಜನತೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ.

For All Latest Updates

ABOUT THE AUTHOR

...view details