ಬಂಟ್ವಾಳ:ವಿಟ್ಲದಲ್ಲಿ ಸಭಾಭವನದ ಫಿನಿಶಿಂಗ್ ಕಾಮಗಾರಿ ಮಾಡುತ್ತಿದ್ದ ವೇಳೆ ಲಕ್ನೋ ಮೂಲದ ಕಾರ್ಮಿಕ ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟರು. ಶೋಕಮಾತೆ ಇಗರ್ಜಿಯ ಅಧೀನಕ್ಕೊಳಪಟ್ಟ ಸಭಾಭವನದ ಕೆಲಸ ಮಾಡುತ್ತಿದ್ದ ಲಕ್ನೋ ಪಿಪ್ರಾ ಗೂಮ್ ಮೂಲದ ಕಾರ್ಮಿಕ ಜಯಪ್ರಕಾಶ್ (25) ಮೃತಪಟ್ಟವರು. ಏ. 26ರ ಸಂಜೆ ದುರ್ಘಟನೆ ಸಂಭವಿಸಿದೆ. ಚಿಕಿತ್ಸೆಗೆಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ವಿಟ್ಲ: ಉತ್ತರ ಭಾರತದ ಕಾರ್ಮಿಕ ಸಾವು; ಖ್ಯಾತ ಕರಾಟೆ ಶಿಕ್ಷಕ ಆತ್ಮಹತ್ಯೆ - ಆತ್ಮಹತ್ಯೆ ಮಾಡಿಕೊಂಡ ಕರಾಟೆ ಶಿಕ್ಷಕ ಧರ್ಣಪ್ಪ ನಾಯ್ಕ್
ವಿಟ್ಲದಲ್ಲಿ ಸಭಾಭವನದ ಫಿನಿಶಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಜಯಪ್ರಕಾಶ್ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ, ಕರಾಟೆ ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಟ್ಲದಲ್ಲಿ ಉತ್ತರ ಭಾರತದ ಕಾರ್ಮಿಕ, ಶಿಕ್ಷಕ ಸಾವು
ಕರಾಟೆ ಶಿಕ್ಷಕ ಆತ್ಮಹತ್ಯೆ: ಖ್ಯಾತ ಕರಾಟೆ ಶಿಕ್ಷಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ.26 ರಂದು ವಿಟ್ಲ ಸಮೀಪದ ನೀರ್ಕಜೆ ಖಂಡಿಗ ಎಂಬಲ್ಲಿ ನಡೆದಿದೆ. ಧರ್ಣಪ್ಪ ನಾಯ್ಕ್ (38) ಮೃತರು. ಮಂಗಳೂರಿನಲ್ಲಿ ಕರಾಟೆ ಶಿಕ್ಷಕರಾಗಿದ್ದು, ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 6 ಚಿನ್ನ, 5 ಬೆಳ್ಳಿ, 1 ಕಂಚು ಪಡೆಯಲು ಕಾರಣಕರ್ತರಾಗಿ, ದೇಶಕ್ಕೆ ಕೀರ್ತಿ ತಂದು ಕೊಟ್ಟ ತರಬೇತುದಾರರಾಗಿದ್ದಾರೆ.
ಇದನ್ನೂ ಓದಿ:ಭದ್ರಾ ಕಾಲುವೆಗೆ ಹಾರಿ ವೃದ್ಧ ದಂಪತಿ ಅತ್ಮಹತ್ಯೆ: ಕಾಪಾಡಲು ಹೋದ ಯುವಕ ನೀರುಪಾಲು