ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೂತನ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಆರು ಮಂದಿ ನೂತನ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ವಕೀಲರು ಮತ್ತು ನೋಟರಿ ಅಗಿರುವ ಸುರೇಶ್ ಕುಮಾರ್ ಬಿ ನಾವೂರು, ಮಂಗಳೂರಿನ ಸಿ ಎ ನಿತಿನ್ ಶೆಟ್ಟಿ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಮಜೂಡಿತ್ ಮೆಂಡೊನಿಕ, ಮಂಗಳೂರಿನ ಕದ್ರಿ ಕಂಬಳದ ರಘುರಾಜ್, ಉಳ್ಳಾಲ ತಾಲೂಕಿನ ಅಚ್ಯುತಾ ಗಟ್ಟಿ ಮತ್ತು ಎನ್ ಎಸ್ ಯು ಐ ಮುಖಂಡ ಸವಾದ್ ಸುಳ್ಯ ಅವರನ್ನು ನೇಮಕ ಮಾಡಲಾಗಿದೆ.