ಕರ್ನಾಟಕ

karnataka

By

Published : Oct 6, 2020, 7:23 PM IST

Updated : Oct 7, 2020, 8:00 AM IST

ETV Bharat / state

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾದರೂ ತರಬೇತಿಗಿಲ್ಲ ಆಹ್ವಾನ: ಕನ್ನಡಿಗರಿಗೆ ಅನ್ಯಾಯ ಆರೋಪ

ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದಿಂದ ಸೀನಿಯರ್ ವಿಭಾಗದಲ್ಲಿ ಪ್ರತಾಪ್ ಹಾಗೂ ಜೂನಿಯರ್ ವಿಭಾಗದಲ್ಲಿ ಜಿಲ್ಲೆಯ ವಿನೋದ್ ಆಯ್ಕೆ ಆಗಿದ್ದರು. ಪ್ರತಾಪ್ ಮಾತ್ರವಲ್ಲದೆ ವಿನೋದ್​​ಗೂ ಕೂಡ ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿಲ್ಲ. ಕರ್ನಾಟಕ ಕಬಡ್ಡಿ ಅಸೋಶಿಯೇಷನ್ ಮಧ್ಯೆ ಕೆಲವು ಸಮಸ್ಯೆಗಳು ಇರುವ ಹಿನ್ನೆಲೆ, ಈ ಪ್ರತಿಭೆ ಇದೀಗ ಅವಕಾಶ ವಂಚಿತವಾಗುತ್ತಿದೆ.

selection-kabaddi-team-karnataka-player-without-call-to-coaching
ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾದರೂ ತರಬೇತಿಗೆ ಸಿಗದ ಆಹ್ವಾನ, ಕನ್ನಡಿಗರಿಗೆ ಅನ್ಯಾಯ

ಮಂಗಳೂರು:ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಲು ಇರುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಗ್ರಾಮೀಣ ಪ್ರತಿಭೆವೊಬ್ಬರು ಇದೀಗ ನೇಪತ್ಯಕ್ಕೆ ಸರಿಯಬೇಕಾದ ಸ್ಥಿತಿ ಎದುರಾಗಿದೆ. ತರಬೇತಿ ಗೆಆಯ್ಕೆಯಾದ ಕರ್ನಾಟಕದ ಏಕೈಕ ಕಬಡ್ಡಿ ಆಟಗಾರನಿಗೆ ಅಸೋಶಿಯೇಷನ್​ಗಳೇ ಅನ್ಯಾಯ ಮಾಡುತ್ತಿವೆಯಾ.? ಎನ್ನುವ ಸಂಶಯವೂ ಮೂಡಲಾರಂಭಿಸಿದೆ. ತರಬೇತಿ ಪಡೆಯುವ ತಂಡದ ಪಟ್ಟಿಯಿಂದ ಹೊರಗುಳಿಯಬೇಕಾದ ಅಸಹಾಯಕ ಸ್ಥಿತಿಯಲ್ಲಿ ಇಲ್ಲೊಬ್ಬ ಪ್ರತಿಭಾವಂತ ಕ್ರೀಡಾಪಟುವಿ ಇದ್ದಾನೆ.

ದ.ಕ.ಜಿಲ್ಲೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್ ಪ್ರತಾಪ್ ಮೊದಲ ಹಂತದ ಆನ್‌ಲೈನ್ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದಿರುವ ಕ್ರೀಡಾಪಟು. ನಿಮ್ಮ ಆಯ್ಕೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎನ್ನುವ ಉತ್ತರ ದೆಹಲಿ ರಾಷ್ಟ್ರೀಯ ಅಮೆಚೂರ್ ಅಸೋಸಿಯೇಷನ್‌ನಿಂದ ಬಂದಿದ್ದು, ಹಳ್ಳಿಗಾಡಿನ ಪ್ರತಿಭೆಗೆ ಅವಕಾಶ ಕೈತಪ್ಪುವ ಆತಂಕ ಎದುರಾಗಿದೆ.

ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಸಚಿನ್ ಪ್ರತಾಪ್ ಅವರು ಆರು ತಿಂಗಳ ಹಿಂದೆ ಭಾರತ ಕಬಡ್ಡಿ ತಂಡದ 28 ಸದಸ್ಯರ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಗೊಂಡ 28 ಸ್ಪರ್ಧಿಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಅವರದ್ದಾಗಿದೆ.

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾದರೂ ತರಬೇತಿಗೆ ಸಿಗದ ಆಹ್ವಾನ, ಕನ್ನಡಿಗರಿಗೆ ಅನ್ಯಾಯ

ಇದನ್ನು ಓದಿ:ಜ್ಯೂ.ಕಬಡ್ಡಿ ತಂಡಕ್ಕೆ ಆಯ್ಕೆಯಾದರೂ ತರಬೇತಿಗೆ ಸಿಗದ ಆಹ್ವಾನ: ಕನ್ನಡಿಗನಿಗೆ ಅನ್ಯಾಯ

ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದಿಂದ ಸೀನಿಯರ್ ವಿಭಾಗದಲ್ಲಿ ಪ್ರತಾಪ್ ಹಾಗೂ ಜೂನಿಯರ್ ವಿಭಾಗದಲ್ಲಿ ಜಿಲ್ಲೆಯ ವಿನೋದ್ ಆಯ್ಕೆ ಆಗಿದ್ದರು. ಪ್ರತಾಪ್ ಮಾತ್ರವಲ್ಲದೆ ವಿನೋದ್​​ಗೂ ಕೂಡ ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿಲ್ಲ. ಕರ್ನಾಟಕ ಕಬಡ್ಡಿ ಅಸೋಶಿಯೇಷನ್ ಮಧ್ಯೆ ಕೆಲವು ಸಮಸ್ಯೆಗಳು ಇರುವ ಹಿನ್ನೆಲೆ, ಈ ಪ್ರತಿಭೆ ಇದೀಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

Last Updated : Oct 7, 2020, 8:00 AM IST

ABOUT THE AUTHOR

...view details