ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ‌ ಕೊರೊನಾ ಇಲ್ಲ, ಭಯ ಬೇಡ: ಜಿಲ್ಲಾಧಿಕಾರಿ

ಮಂಗಳೂರಿನಲ್ಲಿ ಯಾವುದೇ ಕೊರೊನಾ ಶಂಕಿತ ಪ್ರಕರಣ ಕೂಡಾ ಪತ್ತೆಯಾಗಿಲ್ಲ. ಯಾರೂ ಈ ಬಗ್ಗೆ ಭಯ ಪಡುವುದು ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

Sindhu B. Rupesh
ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್

By

Published : Mar 9, 2020, 2:59 PM IST

ಮಂಗಳೂರು:ನಗರದಲ್ಲಿರುವ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ದುಬೈನಿಂದ ಬಂದಿರುವ ವ್ಯಕ್ತಿಗೆ ಕೇವಲ ಜ್ವರ ಅಷ್ಟೇ ಇರೋದು. ಬೇರೆ ಯಾವುದೇ ಲಕ್ಷಣಗಳು ಇರಲಿಲ್ಲ. ಅವರಿಗೆ ಜ್ವರದ ಲಕ್ಷಣ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ವಿಶೇಷ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ ಈ ಸಂದರ್ಭ ಅವರು ನಮಗೆ ಸಹಕಾರ ನೀಡಿರಲಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್



ಆದರೆ ರೋಗದ ಲಕ್ಷಣ ಏನಾದರೂ ಇದ್ದಲ್ಲಿ ತೊಂದರೆಯಾಗುತ್ತೆ ಎಂಬ ಉದ್ದೇಶದಿಂದ ನಾವು ಆ ವ್ಯಕ್ತಿಯನ್ನು ಒಪ್ಪಿಸಿ ತಪಾಸಣೆ ನಡೆಸುತ್ತೇವೆ ಎಂದರು. ಅವರು ಈ ಬಗ್ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ಬರೀ ತಪಾಸಣೆ ಮಾತ್ರ ಮಾಡಲಿದ್ದೇವೆ. ಆದರೆ ಅವರು ನಮಗೆ ತಪಾಸಣೆಗೆ ಸಹಕಾರ ನೀಡಿಲ್ಲ ಎಂದರು.

ಮಂಗಳೂರಿನಲ್ಲಿ ಕೊರೊನಾ ಶಂಕಿತ ಪ್ರಕರಣಗಳೂ ಪತ್ತೆಯಾಗಿಲ್ಲ. ಯಾರೂ ಈ ಬಗ್ಗೆ ಭಯ ಪಡುವುದು ಬೇಡ. ಸಾರ್ವಜನಿಕವಾಗಿ ಸಂಚರಿಸುವಾಗ ಮುಂಜಾಗ್ರತೆ ವಹಿಸಿಕೊಳ್ಳಿ.‌ ವಿಮಾನ ನಿಲ್ದಾಣದಲ್ಲಿ ಬರುವ ಪ್ರತೀ ಪ್ರಯಾಣಿಕರನ್ನು ನಮ್ಮ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ 20 ಸಾವಿರಕ್ಕೂ ಅಧಿಕ ಮಂದಿಯನ್ನು ನಾವು ತಪಾಸಣೆ ನಡೆಸಿದ್ದೇವೆ ಎಂದರು.

ABOUT THE AUTHOR

...view details