ಮಂಗಳೂರು: ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಎಸ್ಆರ್ಟಿಸಿಯ ಎಲ್ಲಾ ಪ್ರಕಾರಗಳ ಬಸ್ ರಾತ್ರಿ ಕರ್ಫ್ಯೂ ಅವಧಿಯಲ್ಲಿ ಹೊರತುಪಡಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ದ.ಕ.ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಾದರೂ ಇನ್ನೂ ಬಸ್ ಸಂಚಾರ ಅವಕಾಶ ದೊರಕಿಲ್ಲ.
ಲಾಕ್‌ಡೌನ್ ಸಡಿಲಿಕೆಯಾದ್ರೂ ಮಂಗಳೂರಿನಲ್ಲಿ ರಸ್ತೆಗಿಳಿಯದ ಬಸ್ಗಳು - ಲಾಕ್ ಡೌನ್ ಸಡಿಲಿಕೆಯಾದರೂ ಇನ್ನೂ ಬಸ್ ಸಂಚಾರ ಅವಕಾಶ ದೊರಕಿಲ್ಲ
ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹಲವಾರು ಜಿಲ್ಲೆಗಳಲ್ಲಿ ಅದಾಗಲೇ ಬಸ್ ಸಂಚಾರವೂ ಆರಂಭವಾಗಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿದ್ರೂ ಕೂಡಾ ಬಸ್ಗಳು ಮಾತ್ರ ಇನ್ನೂ ಡಿಪೋ ಬಿಟ್ಟಿಲ್ಲ.
![ಲಾಕ್‌ಡೌನ್ ಸಡಿಲಿಕೆಯಾದ್ರೂ ಮಂಗಳೂರಿನಲ್ಲಿ ರಸ್ತೆಗಿಳಿಯದ ಬಸ್ಗಳು Dakshina kannada](https://etvbharatimages.akamaized.net/etvbharat/prod-images/768-512-12208904-thumbnail-3x2-hbl.jpg)
ಮಂಗಳೂರು
ದ.ಕ.ಜಿಲ್ಲಾಧಿಕಾರಿ ಎರಡನೇ ಹಂತದ ಸಡಿಲಿಕೆ ಆದೇಶ ಹೊರಡಿಸಿದ್ದರೂ, ಜಿಲ್ಲೆಯ ಒಳಗೆ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ. ಆದ್ದರಿಂದ ಎಲ್ಲಾ ಬಸ್ಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದು, ಯಾವುದೇ ಬಸ್ಗಳು ಸಂಚಾರ ಮಾಡುತ್ತಿಲ್ಲ. ಆದರೆ ಕೋವಿಡ್ ಕಾರ್ಯಕ್ಕೆ ನಿಯೋಜಿಸಲಾಗಿರುವ ಬಸ್ ಗಳಿಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಹಾಗಾಗಿ ಆ ಬಸ್ಗಳು ಮಾತ್ರ ಸಂಚಾರ ಮಾಡುತ್ತಿವೆ.