ಕರ್ನಾಟಕ

karnataka

ETV Bharat / state

ಶಾಲೆ ಪುನಾರಂಭವಾದ್ರೂ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ.. ವಿದ್ಯಾರ್ಥಿಗಳ ಪರದಾಟ

ಕಡಬ, ಸುಳ್ಯ ತಾಲೂಕಿನ ಹಲವು ಗ್ರಾಮೀಣ ಭಾಗದಲ್ಲಿ ಬಸ್‌ ಸಂಚಾರಗಳು ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳು ಪುನಾರಂಭಗೊಂಡಿದ್ದು, ಬಸ್‌ ಇಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮೀಣ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದ್ದಾರೆ.

no bus facility in kadaba
ಶಾಲೆ ಪುನರಾರಂಭವಾದ್ರೂ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ...ವಿದ್ಯಾರ್ಥಿಗಳ ಪರದಾಟ

By

Published : Jan 5, 2021, 9:47 AM IST

ಕಡಬ: ಶಾಲಾ - ಕಾಲೇಜುಗಳು ಪುನಾರಂಭವಾಗಿದ್ದು, ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಕಡಬ, ಅಲಂಕಾರು ಕಡೆಗಳಿಂದ ಪುತ್ತೂರಿನ ಶಾಲಾ ಕಾಲೇಜುಗಳಿಗೆ ಆಗಮಿಸಲು ಸರಿಯಾದ ಬಸ್‌ ಸೌಲಭ್ಯವಿಲ್ಲದೇ (ಗ್ರಾಮೀಣ ಬಸ್​ ಸಂಚಾರ) ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಸುಳ್ಯ ಹಾಗೂ ಕಡಬ ತಾಲೂಕಿನ ಬಹುತೇಕ ಪ್ರದೇಶಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಅಲ್ಲಿಂದ ಹೇಗೋ ಸಾಹಸ ಮಾಡಿ ಕಡಬ ಪೇಟೆಗೆ ಬಂದರೂ ಇಲ್ಲಿಂದ ಪುತ್ತೂರಿನ ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆ, ಕಡಬದಿಂದ ಪುತ್ತೂರು ಕಡೆ ಹೋಗುವ ಕಡಬ - ಅಲಂಕಾರು - ಶಾಂತಿಮೊಗೆರು - ಪುತ್ತೂರು ಬಸ್ ಸೇರಿದಂತೆ ಬೆಳಗ್ಗೆ ಸಂಚರಿಸುವ ಹಲವಾರು ಬಸ್​​​​ಗಳನ್ನು ರದ್ದು ಮಾಡಲಾಗಿದೆ.

ಶಾಲೆ ಪುನಾರಂಭವಾದ್ರೂ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ...ವಿದ್ಯಾರ್ಥಿಗಳ ಪರದಾಟ

ಈ ಸುದ್ದಿಯನ್ನೂ ಓದಿ:ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ ಹೃದಯಾಘಾತದಿಂದ ಸಾವು

ಆದರೆ, ಶಾಲಾ ಕಾಲೇಜುಗಳು ಆರಂಭವಾಗಿ ಹಲವು ದಿನಗಳೇ ಕಳೆದರೂ ರದ್ದು ಮಾಡಿದ ಬಸ್​​​​​ಗಳು ಮಾತ್ರ ವಾಪಸ್​​ ರಸ್ತೆಗೆ ಬಂದಿಲ್ಲ. ಇದರಿಂದಾಗಿ ಕಡಬದಿಂದ ಶಾಲಾ ಕಾಲೇಜುಗಳಿಗೆ ಆಗಮಿಸುವ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ.

ABOUT THE AUTHOR

...view details