ಕರ್ನಾಟಕ

karnataka

ETV Bharat / state

ವ್ಯವಸ್ಥಿತ ಯೋಜನೆಯೊಂದಿಗೆ ನೂತನ ಸೆಮಿಸ್ಟರ್ ಪ್ರಾರಂಭಿಸಿದ ಸುರತ್ಕಲ್​ನ ಎನ್ಐಟಿಕೆ - systematic planning from nitk

ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಉಪನ್ಯಾಸ ನೀಡುವ ಸಲುವಾಗಿ ಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯವು ನೂತನ ಯೋಜನೆಯೊಂದನ್ನು ರೂಪಿಸುವ ಮೂಲಕ ಈ ವರ್ಷದ ಸೆಮಿಸ್ಟರ್​ಗಳನ್ನು ಆರಂಭಿಸಿದೆ.

NITK started the new semester with systematic planning
NITK started the new semester with systematic planning

By

Published : Aug 3, 2020, 9:44 PM IST

ಮಂಗಳೂರು: ನಗರದ ಸುರತ್ಕಲ್​ನ ಎನ್ಐಟಿಕೆ (ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ) ಸಂಸ್ಥೆಯು ವರ್ಚುವಲ್ ಫ್ಲಿಪ್ಡ್ ಕ್ಲಾಸ್ ರೂಂ ಅನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಉಪನ್ಯಾಸ ನೀಡಲು ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸಿ ನೂತನ ಸೆಮಿಸ್ಟರ್ ಅನ್ನು ಪ್ರಾರಂಭಿಸಿದೆ.

ಈ ಮೂಲಕ ವಿದ್ಯಾರ್ಥಿಗಳಿಗೆ ಬೋಧಕರಿಂದ ರೆಕಾರ್ಡ್ ಮಾಡಿರುವ ವಿಡಿಯೋದ ಉಪನ್ಯಾಸವನ್ನು ನೀಡಲಾಗುತ್ತದೆ. ಆ ಬಳಿಕ ವಿದ್ಯಾರ್ಥಿಗಳು ಹಾಗೂ ಬೋಧಕರ ನಡುವೆ ನೇರ ಸಂವಾದವನ್ನೂ ಸಹ ಇದರಲ್ಲಿ ಏರ್ಪಡಿಸಬಹುದಾಗಿದೆ.‌

ಈ ಮಾದರಿಯ ಬೋಧನಾ ವಿಧಾನವನ್ನು ಸಕ್ರಿಯಗೊಳಿಸುವ ಸಲುವಾಗಿ ಎನ್ಐಟಿಕೆ ಆಂತರಿಕ ಸಾಫ್ಟ್​ವೇರ್ ಇಂಟಿಗ್ರೇಟೆಡ್ ರಿಸೋರ್ಸ್ ಆ್ಯಂಡ್ ಇನ್ಫಾರ್ಮೇಷನ್ ಶೇರಿಂಗ್​ನಲ್ಲಿ‌ ಶೈಕ್ಷಣಿಕ ಸಾಧನಗಳಾದ ಮೋಡಲ್, ಬಿಗ್ ಬ್ಲೂಬಟನ್ ಹಾಗೂ ಮೈಕ್ರೋಸಾಫ್ಟ್ ಟೀಂಗಳನ್ನು ಸಂಯೋಜಿಸಿದೆ.

ABOUT THE AUTHOR

...view details