ಕರ್ನಾಟಕ

karnataka

ETV Bharat / state

Job Alert: ಸುರತ್ಕಲ್​ನ ಎನ್​ಐಟಿಕೆಯಲ್ಲಿ ಗ್ರೂಪ್​ ಸಿ ಹುದ್ದೆ ನೇಮಕಾತಿ; ಡಿಗ್ರಿ, ಪಿಯುಸಿ ಆದವರಿಗೆ ಅವಕಾಶ - ವಿವಿಧ ಬೋಧಕೇತರ ಹುದ್ದೆಗಳ ಭರ್ತಿಗೆ

ಎನ್​ಐಟಿಕೆಯಲ್ಲಿ ಗ್ರೂಪ್​ ಸಿ ವರ್ಗದ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

NITK job notification for Group c post
NITK job notification for Group c post

By ETV Bharat Karnataka Team

Published : Aug 22, 2023, 5:17 PM IST

ಮಂಗಳೂರಿನ ಸುರತ್ಕಲ್​ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್​ಐಟಿಕೆ)ನಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಪಿಯುಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 112 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಗ್ರೂಪ್​ ಸಿ ಮಟ್ಟದ ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ

ಹುದ್ದೆ ವಿವರ: ಸೂಪರಿಂಟೆಂಡೆಂಟ್​​ 4, ಸೀನಿಯರ್​ ಟೆಕ್ನಿಶಿಷಿಯನ್​ 18, ಸೀನಿಯರ್​ ಅಸಿಸ್ಟೆಂಟ್​ 11, ಟೆಕ್ನಿಶಿಯನ್​ 35, ಜ್ಯೂನಿಯರ್​ ಅಸಿಸ್ಟೆಂಟ್​ 23, ಆಫೀಸರ್​ ಅಟೆಂಡೆಂಟ್​​ 21.

ವಿದ್ಯಾರ್ಹತೆ: ಸೂಪರಿಂಟೆಂಡೆಂಟ್​ ಹುದ್ದೆಗೆ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಉಳಿದ ಹುದ್ದೆಗಳಿಗೆ ಅಭ್ಯರ್ಥಿಗಳು ಡಿಪ್ಲೊಮಾ ಅಥವಾ ಪಿಯುಸಿ ಪದವಿ ಶಿಕ್ಷಣವನ್ನು ಪಡೆದಿರಬೇಕು.

ವಯೋಮಿತಿ: ಸೂಪರಿಂಟೆಂಡೆಂಟ್​ ಹುದ್ದೆಗೆ 30 ವರ್ಷ ಸೀನಿಯರ್​ ಟೆಕ್ನಿಶಿಯನ್​, ಸೀನಿಯರ್​ ಅಸಿಸ್ಟೆಂಟ್​​ ಹುದ್ದೆಗೆ 33 ಮತ್ತು ಉಳಿದ ಹುದ್ದೆಗಳಿಗೆ 27 ವರ್ಷದ ವಯೋಮಿತಿ ದಾಟಿರಬಾರದು.

ವೇತನ: ಸೂಪರಿಂಟೆಂಡೆಂಟ್​ ಹುದ್ದೆಗೆ 9,300-43,800 ರೂ. ವೇತನ, ಉಳಿದ ಹುದ್ದೆಗಳಿಗೆ ಮಾಸಿಕ 5,200- 20,200 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಮತ್ತು ಒಬಿಸಿ ಸೇರಿದಂತೆ ಇತರೆ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ಇದೆ.

ಆಯ್ಕೆ ವಿಧಾನ: ಈ ಹುದ್ದೆಗಳನ್ನು ಕಂಪ್ಯೂಟರ್​ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಅಭ್ಯರ್ಥಿಗಳು nitk.ac.in ಜಾಲತಾಣದ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಅಭ್ಯರ್ಥಿಗಳ ಸಂಪೂರ್ಣವಾಗಿ ಓದುವುದು ಅವಶ್ಯ. ಅಭ್ಯರ್ಥಿಗಳು ಆಗಸ್ಟ್​ 17ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನ ಸೆಪ್ಟೆಂಬರ್​ 6 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು 011- 40759000/011-69227700 ಈ ಸಂಖ್ಯೆಗೆ ಕರೆ ಮಾಡಬಹುದು ಅಥವಾ crenit@nta.ac.in ಈ ಇಮೇಲ್​ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ. ಜೊತೆಗೆ ಸಂಪೂರ್ಣ ಮಾಹಿತಿಗೆ ಎನ್​ಐಟಿಕೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: Canara Bank Recruitment: ಪ್ರೊಬೆಷನರಿ ಸೇರಿದಂತೆ 500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details