ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳದಲ್ಲಿ ಕಾರ್ಕಳ ಬಜಗೋಳಿ ಮಾಳ ನಿವಾಸಿ ನಿಶಾಂತ್ ಶೆಟ್ಟಿಯವರು 9.19 ಸೆಕೆಂಡ್ಸ್ನಲ್ಲಿ 100ಮೀ ದೂರ ಕೋಣಗಳನ್ನು ಓಡಿಸಿ ದಾಖಲೆ ನಿರ್ಮಿಸಿದ್ದಾರೆ.
ಮುಲ್ಕಿ ತೋಡಾರುಗುತ್ತು ಶಮ್ಮಿ ಶಿವಪ್ರಸಾದ್ ಅವರ ಕೋಣಗಳನ್ನು ಓಡಿಸಿರುವ ನಿಶಾಂತ್ ಶೆಟ್ಟಿ, ಈ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರು ಕಂಬಳದ ಲಕ್ಷ್ಮಣ ಕರೆಯಲ್ಲಿ 125 ಮೀ ಗುರಿಯನ್ನು 11.49 ಸೆಕೆಂಡ್ ನಲ್ಲಿ ತಲುಪಿದ್ದಾರೆ. ಅಂದರೆ 100 ಮೀ. ಓಟಕ್ಕೆ ಅದನ್ನು ಪರಿವರ್ತಿಸಿದಾಗ 9.19 ಸೆಕೆಂಡ್ಸ್ನಲ್ಲಿ ಕೋಣ ಓಡಿಸಿ ನೂತನ ದಾಖಲೆ ಬರೆದಿದ್ದಾರೆ.