ಮಂಗಳೂರು: ಆಸೆ, ಆಮಿಷಗಳನ್ನೊಡ್ಡಿ ಮತಾಂತರ ಮಾಡುವ ಕಾರ್ಯ ದೇಶದಲ್ಲಿ ನಡೆಯುತ್ತಿತ್ತು. ಇದೀಗ ಬಿಜೆಪಿ ಸರ್ಕಾರ ಬಂದ ಬಳಿಕ ಮತಾಂತರ ನಿಷೇಧಕ್ಕೂ ವಿಧೇಯಕವನ್ನು ಜಾರಿಗೊಳಿಸುವ ಕಾರ್ಯ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಲವ್ ಜಿಹಾದ್ ಕುರಿತು ಕಾನೂನು ತರುವಂತೆ ಸಿಎಂಗೆ ಕಟೀಲ್ ಮನವಿ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಾತನಾಡಿದ ಅವರು, ಪ್ರೀತಿ - ಪ್ರೇಮದ ವಿಚಾರದಲ್ಲಿ ಹಿಂದೂ ಹುಡುಗಿಯರ ಮನಸ್ಸನ್ನು ಕೆಡಿಸಿ ಲವ್ ಜಿಹಾದ್ ಮಾಡಲಾಗುತ್ತಿದೆ. ಆದ್ದರಿಂದ ಲವ್ ಜಿಹಾದ್ಗೂ ಕಠಿಣ ಕಾನೂನು ಕ್ರಮ ತರುವ ಬಗ್ಗೆ ಸಿಎಂಗೆ ಮನವಿ ಮಾಡುತ್ತೇನೆ. ಈ ಮೂಲಕ ರಾಜ್ಯದಲ್ಲಿ ಮತಾಂತರ ಪ್ರಕರಣಗಳಿಗೆ ಕಡಿವಾಣ ಹಾಕುವ ಕಾರ್ಯ ಮಾಡಲಾಗುತ್ತದೆ ಎಂದರು.
ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಿವರ್ತನೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಮನಸ್ಸುಗಳನ್ನು ಅರಳಿಸುವ ಕೆಲಸವನ್ನು ಅಧ್ಯಾತ್ಮ ಮಾಡುತ್ತದೆ. ನಮ್ಮ ದೇಶ ಶ್ರೇಷ್ಠವಾದ ಸಂಸ್ಕೃತಿಯನ್ನು ಹೊಂದಿದೆ. ಆ ನಂಬಿಕೆಯ ಮೂಲಕ ಭಾರತೀಯರು ಪ್ರತಿಯೊಬ್ಬರಲ್ಲಿಯೂ ದೇವರನ್ನು ಕಾಣುವ ಚಿಂತನೆಯನ್ನು ಹೊಂದಿದ್ದಾರೆ. ಆದರೆ ವಿಕೃತ ಮನಸ್ಥಿತಿಯವರು ಮನಸ್ಸುಗಳನ್ನು ಕದಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರೂ ಸೇನೆಗಳ ರಾವತ್ ಅವರು ಅಗಲಿದ ಸಂದರ್ಭದಲ್ಲಿ ಕೀಳಾಗಿ ಮಾಡನಾಡಿದವರು ನಮ್ಮಲ್ಲಿಯೇ ಇದ್ದರು. ನಮ್ಮ ಸರ್ಕಾರ ಅಂತಹ ವಿಕೃತ ಮನಸ್ಥಿತಿಯ ಎಲ್ಲರನ್ನೂ ಬಂಧಿಸುವ ಕಾರ್ಯ ಮಾಡುತ್ತದೆ. ಈಗಾಗಲೇ ಇದಕ್ಕೆ ಬೇಕಾದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೃಷಿ ಕಾನೂನು ಹಿಂಪಡೆಯಲು ಡಿ. 20ರವರೆಗೆ ಗಡುವು: ಬೇಡಿಕೆ ಈಡೇರಿಸದಿದ್ದರೆ ಬಾರಕೋಲು ಚಳವಳಿ ಎಚ್ಚರಿಕೆ