ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ರಾತ್ರಿ ಕರ್ಫ್ಯೂ ಬಂದೋಬಸ್ತ್ : ಫೀಲ್ಡಿಗಿಳಿದು ತಪಾಸಣೆ ನಡೆಸಿದ ನಗರ ಪೊಲೀಸ್ ಕಮಿಷನರ್​ - ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಶನಿವಾರ ರಾತ್ರಿಯಿಂದ ರಾಜ್ಯದ 8 ನಗರಗಳಲ್ಲಿ ನೈಟ್​ ಕರ್ಫ್ಯೂ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಖುದ್ದು ತಪಾಸಣೆ ನಡೆಸಿದರು.

ಫೀಲ್ಡಿಗಿಳಿದು ತಪಾಸಣೆ ನಡೆಸಿದ ಪೊಲೀಸ್ ಆಯುಕ್ತರು
Police commissioner inspected

By

Published : Apr 11, 2021, 7:16 AM IST

ಮಂಗಳೂರು:ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ 8 ನಗರಗಳಲ್ಲಿ ನೈಟ್​ ಕರ್ಫ್ಯೂ ಜಾರಿ ಮಾಡಿದೆ. ಈ ಸಂಬಂಧ ನಗರಲ್ಲಿ ಬಿಗಿ ಪೊಲೀಸ್​​ ಬಂದೋಬಸ್ತ್​​ ವ್ಯವಸ್ಥೆ ಮಾಡಲಾಗಿತ್ತು.

ಫೀಲ್ಡಿಗಿಳಿದು ತಪಾಸಣೆ ನಡೆಸಿದ ಪೊಲೀಸ್ ಆಯುಕ್ತರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 45 ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದ್ದು, ನೈಟ್ ಕರ್ಫ್ಯೂ ಬಂದೋಬಸ್ತಿಗೆ ಸಿವಿಲ್, ಡಿಎಆರ್, ಕೆಎಸ್ಆರ್​​​ಪಿ ಸಿಬ್ಬಂದಿ, 47 ಪಿಎಸ್ಐ, ಎಸಿಪಿ, ಡಿಸಿಪಿಗಳು ಸೇರಿದಂತೆ ಸುಮಾರು 350 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಓದಿ: ಕೋವಿಡ್​ ನೈಟ್​​ ಕರ್ಫ್ಯೂ: ಕೆಆರ್ ಪುರ ಸೇತುವೆ ಬಂದ್

ನೈಟ್​ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಖುದ್ದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಫೀಲ್ಡಿಗಿಳಿದು ತಪಾಸಣೆ ನಡೆಸಿದರು.

ABOUT THE AUTHOR

...view details