ಕರ್ನಾಟಕ

karnataka

ETV Bharat / state

ನೈಟ್ ಕರ್ಫ್ಯೂ ಎಫೆಕ್ಟ್​: ಬದಲಾದ ಕಟೀಲು ಯಕ್ಷಗಾನ ಪ್ರದರ್ಶನ ಸಮಯ

ಜ. 2ರ ಬೆಳಗ್ಗೆ 5 ಗಂಟೆಯವೆರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಅಲ್ಲಿಯವರೆಗೆ ಯಕ್ಷಗಾನ ಪ್ರದರ್ಶನದ ಸಮಯದಲ್ಲಿ ಬದಲಾವಣೆ ಇರಲಿದೆ. ಮುಂದೆ ಸರ್ಕಾರ ರಾತ್ರಿ ಕರ್ಫ್ಯೂ ಹಿಂಪಡೆದಲ್ಲಿ ಮತ್ತೆ ಯಥಾಸ್ಥಿತಿಯಂತೆ ರಾತ್ರಿ ಪೂರ್ತಿ ಯಕ್ಷಗಾನ ಸೇವೆ ಆರಂಭವಾಗಲಿದೆ ಎಂದು ಕಟೀಲು ಶ್ರೀ ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.

ಯಕ್ಷಗಾನ
ಯಕ್ಷಗಾನ

By

Published : Dec 23, 2020, 10:33 PM IST

ಮಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಗೊಂಡ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ನಾಳೆಯಿಂದ ಕಟೀಲು ಶ್ರೀ ಕ್ಷೇತ್ರದ ಯಕ್ಷಗಾನ ಪ್ರದರ್ಶನದಲ್ಲಿ ಸಮಯ ಬದಲಾವಣೆಯಾಗಲಿದೆ. ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಯಕ್ಷಗಾನ ಪ್ರದರ್ಶನ ಆರಂಭಗೊಂಡು ರಾತ್ರಿ 9.30ಕ್ಕೆ ಮಂಗಳ ಪೂಜೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ರಾತ್ರಿ 8.30ಕ್ಕೆ ಚೌಕಿ ಪೂಜೆ ಆರಂಭಗೊಂಡು ಪೂರ್ವರಂಗ ಕುಣಿತ ಪ್ರಾರಂಭವಾಗುತ್ತದೆ. ರಾತ್ರಿ 10.30ಕ್ಕೆ ಪ್ರಸಂಗ ಆರಂಭಗೊಂಡರೆ, ಬೆಳಗ್ಗೆ 6ರವರೆಗೆ ಪ್ರದರ್ಶನಗೊಳ್ಳುವ ಯಕ್ಷಗಾನಕ್ಕೆ ನೈಟ್ ಕರ್ಫ್ಯೂನಿಂದ ತೊಂದರೆಯಾಗಿದೆ. ಹಾಗಾಗಿ ಕಟೀಲು ಯಕ್ಷಗಾನ ಮೇಳದ ಪ್ರದರ್ಶನದ ಸಮಯ ಬದಲಾವಣೆ ಮಾಡಲಾಗಿದೆ.

ಕಟೀಲು ಯಕ್ಷಗಾನ ಪ್ರದರ್ಶನ ಸಮಯ ಬದಲು

ಜ. 2ರ ಬೆಳಗ್ಗೆ 5 ಗಂಟೆಯವೆರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಅಲ್ಲಿಯವರೆಗೆ ಯಕ್ಷಗಾನ ಪ್ರದರ್ಶನದ ಸಮಯದಲ್ಲಿ ಬದಲಾವಣೆ ಇರಲಿದೆ. ಮುಂದೆ ಸರ್ಕಾರ ರಾತ್ರಿ ಕರ್ಫ್ಯೂ ಹಿಂಪಡೆದಲ್ಲಿ ಮತ್ತೆ ಯಥಾಸ್ಥಿತಿಯಂತೆ ರಾತ್ರಿ ಪೂರ್ತಿ ಯಕ್ಷಗಾನ ಸೇವೆ ಆರಂಭವಾಗಲಿದೆ ಎಂದು ಕಟೀಲು ಶ್ರೀ ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.

ABOUT THE AUTHOR

...view details