ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಧಿಸಲಾಗಿದ್ದ, ರಾತ್ರಿ ನಿರ್ಬಂಧವನ್ನು ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದ ಬಳಿಕ ಶುಕ್ರವಾರದಿಂದ ಮೂರು ದಿನಗಳವರೆಗೆ ರಾತ್ರಿ ನಿರ್ಬಂಧ ಹೇರಲಾಗಿತ್ತು. ಅದರಂತೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳ ಬಂದ್ಗೆ ಆದೇಶಿಸಲಾಗಿತ್ತು.
ಈ ಆದೇಶ ನಾಳೆ ( ಸೋಮವಾರ) ಬೆಳಗ್ಗೆ ಮುಕ್ತಾಯ ವಾಗಬೇಕಿತ್ತು. ಇದೀಗ ಈ ಆದೇಶವನ್ನು ಮತ್ತೆರಡು ದಿನಕ್ಕೆ ಮುಂದುವರಿಸಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಇರಲಿದೆ. ಅದರ ಜೊತೆಗೆ ಮತ್ತೆ ಎರಡು ದಿನಗಳ ಕಾಲ (ಮಂಗಳವಾರ) ಮದ್ಯಮಾರಾಟವನ್ನು ನಿಷೇಧಿಸಲಾಗಿದೆ.