ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಪುತ್ರ ಬಿ.ಎಂ ಪಾಷಾ ಅವರ ಮನೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಮಂಗಳೂರಿನ ಮಾಜಿ ಶಾಸಕನ ಪುತ್ರನ ಮನೆ ಮೇಲೆ ಎನ್‌ಐಎ ದಾಳಿ - ಬಿ.ಎಂ ಪಾಷಾಗೆ ಐಸಿಸ್ ಜೊತೆ ಸಂಪರ್ಕ
ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಪುತ್ರ ಬಿ.ಎಂ ಪಾಷಾ ಅವರ ಮನೆ ಮೇಲೆ ಬೆಂಗಳೂರಿನಿಂದ ಆಗಮಿಸಿರುವ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿ.ಎಂ ಪಾಷಾ ಮನೆ ಮೇಲೆ ಎನ್‌ಐಎ ದಾಳಿ
ಎನ್‌ಐಎ ಅಧಿಕಾರಿಗಳು ಮುಂಜಾನೆ ನಾಲ್ಕು ಕಾರುಗಳಲ್ಲಿ ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ ಬಾಷಾ ಮನೆಗೆ ಆಗಮಿಸಿದ್ದರು. ಬಿ.ಎಂ ಬಾಷಾ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ.
ಬಾಷಾ ಮನೆ ಮೇಲಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದಿನಬ್ಬ ಅವರ ಮೊಮ್ಮಗಳು ಕೇರಳದಲ್ಲಿ ನಾಪತ್ತೆಯಾಗಿ ಐಸಿಸ್ ಸೇರಿದ್ದಳು ಎಂದು ಈ ಹಿಂದೆ ಹೇಳಲಾಗಿತ್ತು.
Last Updated : Aug 4, 2021, 11:07 AM IST