ಕರ್ನಾಟಕ

karnataka

ETV Bharat / state

ಮಂಗಳೂರು: ನಾಳೆ ರಾತ್ರಿ ಹನ್ನೆರಡೂವರೆ ಗಂಟೆವರೆಗೆ ಮಾತ್ರ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶ - ಕರಾವಳಿಯಲ್ಲಿ ಹೊಸ ವರ್ಷಾಚಾರಣೆಗೆ ಬಿಗಿ ಕ್ರಮ

ಕರಾವಳಿಯಲ್ಲಿ ಹೊಸ ವರ್ಷಾಚಾರಣೆಗೆ ಬಿಗಿ ಕ್ರಮ - 12.30ರವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ - ಕಾನೂನು ಬಾಹಿರ ಚಟುವಟಿಕೆ ವಿರುದ್ಧ ಹದ್ದಿನ ಕಣ್ಣು

ಕರಾವಳಿಯಲ್ಲಿ ನಾಳೆ ರಾತ್ರಿ 12. 30ರವರೆಗೆ ಮಾತ್ರ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶ
new-year-celebration-only-till-midnight-12-30-in-dakshina-kannada

By

Published : Dec 30, 2022, 9:57 AM IST

ಮಂಗಳೂರು:ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಗತ್ಯ ಕ್ರಮ ಮತ್ತು ಮುನ್ನೆಚ್ಚರಿಕೆ ನಡೆಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಡಿ. 31ರಂದು ರಾತ್ರಿ 12. 30ರವರೆಗೆ ಮಾತ್ರ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.

ಕರಾವಳಿಯಲ್ಲಿ ನೋಂದಾಯಿತ ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್​​ಗಳಲ್ಲಿ ಮಾತ್ರ ಡಿ.31 ರಂದು ರಾತ್ರಿ 12.30 ವರೆಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದ್ದು, ಧ್ವನಿವರ್ಧಕ ಹಾಗೂ ಅತಿ ಹೆಚ್ಚು ಶಬ್ದ ಉಂಟು ಮಾಡುವ ಉಪಕರಣಗಳನ್ನು ರಾತ್ರಿ 10ರ ಬಳಿಕ ಬಳಸುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಕಾರ್ಯಕ್ರಮ ಆಯೋಜನೆಗೆ ಸಂಬಂಧಪಟ್ಟ ಪೊಲೀಸ್‌ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯತಕ್ಕದ್ದು ಎಂದು ತಿಳಿಸಲಾಗಿದೆ.

ಸಭಾಂಗಣ, ತೆರೆದ ಸ್ಥಳ, ಕಲ್ಯಾಣ ಮಂಟಪ, ಸಭಾ ಭವನ, ಅಪಾರ್ಟ್​​ಮೆಂಟ್, ಕಡಲ ತೀರ, ಹೋಮ್ ಸ್ಟೇ, ಮಾಲ್ ಪ್ರದೇಶಗಳಲ್ಲಿ ಡಿಜೆ, ಜಾಲಿ ಡಾನ್ಸ್ ಗಳನ್ನು ಮಾಡುವಂತಿಲ್ಲ. ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ ಕೋವಿಡ್​​ ನಿಯಮಗಳನ್ನು ಪಾಲಿಸಬೇಕು. ಅಬಕಾರಿ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ಅನುಮತಿ ಪಡೆದಂತಹ ಹೋಂ ಸ್ಟೇ, ಪಬ್, ಕ್ಲಬ್ ಪರಿಸರದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು ಎಂದು ಸೂಚಿಸಿದ್ದಾರೆ.

ಯಾವುದೇ ರೀತಿ ಕಾನೂನು ಬಾಹಿರ ಚಟುವಟಿಕೆ ನಡೆದಲ್ಲಿ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕ್ರಮವಹಿಸಲಾಗುವುದು. ಪಬ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಅಶ್ಲೀಲ ನೃತ್ಯ, ಗಾಂಜಾ, ಅಫೀಮು, ಮತ್ತಿತರರ ಮತ್ತೇರಿಸುವ ಅಮಲು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಾರ್‌ ಧಾಮ್‌ ಯಾತ್ರೆ ಅರ್ಜಿ ಸಲ್ಲಿಕೆ ಜನವರಿ 31ರ ವರೆಗೆ ವಿಸ್ತರಣೆ

ABOUT THE AUTHOR

...view details