ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ: ಕೋಟೆಕಾರು ಪಟ್ಟಣ ಪಂಚಾ​ಯಿತಿ ಬಿಜೆಪಿ ತೆಕ್ಕೆಗೆ - ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರು ಆಯ್ಕೆ

ಕೋಟೆಕಾರು ಪಟ್ಟಣ ಪಂಚಾಯತ್​ಗೆ ಬಿಜೆಪಿಯ ಜಯಶ್ರೀ ಫ್ರಫುಲ್ಲಾ ದಾಸ್ ನೂತನ ಅಧ್ಯಕ್ಷರಾಗಿ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ.

New President elected to Kotakaru Panchayat
ಕೋಟೆಕಾರು ಪಟ್ಟಣ ಪಂಚಾಯಿತಿಗೆ ಬಿಜೆಪಿ ತೆಕ್ಕೆಗೆ

By

Published : Nov 5, 2020, 7:59 PM IST

Updated : Nov 5, 2020, 8:04 PM IST

ಉಳ್ಳಾಲ (ದಕ್ಷಿಣ ಕನ್ನಡ): ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದೆ ಖಾಲಿಯಿದ್ದ ಕೋಟೆಕಾರು ಪಟ್ಟಣ ಪಂಚಾಯತ್​​ಗೆ ಬಿಜೆಪಿಯ ಜಯಶ್ರೀ ಫ್ರಫುಲ್ಲಾ ದಾಸ್ ನೂತನ ಅಧ್ಯಕ್ಷರಾಗಿ ಗುರುವಾರ ಅವಿರೋಧ ಆಯ್ಕೆಯಾದರು.

ಮೀಸಲಾತಿಗೆ ಅನುಸಾರವಾಗಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದೇ ಎರಡು ವರ್ಷಗಳ ಕಾಲ ಉಪಾಧ್ಯಕ್ಷರ ಹೆಗಲಿಗೆ ಪಟ್ಟಣ ಪಂಚಾಯತ್​ ಆಡಳಿತವನ್ನು ವಹಿಸಲಾಗಿತ್ತು. ಭಾರತಿ ರಾಘವ ಗಟ್ಟಿ ಉಪಾಧ್ಯಕ್ಷರಾಗಿದ್ದರು.

ಎರಡು ವರ್ಷಗಳ ಹಿಂದೆ ಎಸ್ಟಿ ಮಹಿಳೆಗೆ ಮೀಸಲಾತಿ ಬಂದಿರುವುದರಿಂದ ಬಿಜೆಪಿಯಿಂದ ಅಭ್ಯರ್ಥಿ ಇರಲಿಲ್ಲ. ಆದ್ದರಿಂದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ನಡೆದಿತ್ತು.

ಜಯಶ್ರೀ ಫ್ರಫುಲ್ಲಾ ದಾಸ್ ಸಂಭ್ರಮ

ಬಿಜೆಪಿ ಬೆಂಬಲಿತ 11, ಕಾಂಗ್ರೆಸ್-4 ಎಸ್​​​ಡಿಪಿಐ-1 ಹಾಗೂ ಸಿಪಿಎನ 1 ಅಭ್ಯರ್ಥಿ ಚುನಾಯಿತರಾಗಿದ್ದರು. ಇದೀಗ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷರ ಆಯ್ಕೆ ನಡೆದರೂ ಕೇವಲ ಆರು ತಿಂಗಳಿಗೆ ಮಾತ್ರ ಅಧಿಕಾರಾವಧಿ ಇರಲಿದೆ.

Last Updated : Nov 5, 2020, 8:04 PM IST

ABOUT THE AUTHOR

...view details