ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಮೊದಲ ಬಾರಿ ಆಗಮಿಸಿದ ಮೈನ್​ಲೈನ್ ಕಂಟೈನರ್ ಹಡಗಿಗೆ ಜಲಫಿರಂಗಿ ಸ್ವಾಗತ

ನವಮಂಗಳೂರು ಬಂದರಿಗೆ ಮೊದಲ ಬಾರಿಗೆ ಮೈನ್‌ಲೈನ್ ಕಂಟೈನರ್ ಹಡಗು ಆಗಮಿಸಿದೆ. ಮಂಗಳೂರಿಗೆ ಬಂದ ಹಡಗನ್ನು ಜಲಫಿರಂಗಿ ಮೂಲಕ ಸ್ವಾಗತಿಸಲಾಯಿತು.

new-mangaluru-port-authority-receives-first-mainline-container-vessel
ಮಂಗಳೂರಿಗೆ ಮೊದಲ ಸಲ ಆಗಮಿಸಿದ ಮೈನ್​ಲೈನ್ ಕಂಟೈನರ್ ಹಡಗಿಗೆ ಜಲಫಿರಂಗಿ ಸ್ವಾಗತ

By

Published : Jul 4, 2022, 12:04 PM IST

ಮಂಗಳೂರು:ನವಮಂಗಳೂರು ಬಂದರಿಗೆ ಮೊದಲ ಮೈನ್‌ಲೈನ್ ಕಂಟೈನರ್ ಹಡಗು ಆಗಮಿಸುವ ಮೂಲಕ ಎನ್​ಎಂಪಿಎ ಬಂದರು ಮಹತ್ವದ ಮೈಲಿಗಲ್ಲು ನೆಟ್ಟಿದೆ. 276.5 ಮೀಟರ್ ಉದ್ದವಿರುವ ಎಂಎಸ್‌ಸಿ ಎರ್ಮಿನಿಯಾ ಹಡಗು ಆಗಮಿಸುವ ಮೂಲಕ ನವಮಂಗಳೂರು ಬಂದರಿನಲ್ಲಿ ಮೈನ್‌ಲೈನ್ ಕಂಟೈನರ್ ಹಡಗಿನ ಅಧ್ಯಾಯ ಆರಂಭಗೊಂಡಿದೆ.

ಕಂಟೈನರ್ ನಿರ್ವಹಣೆಗೆ ಎನ್​ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಹಸಿರು ನಿಶಾನೆ

ಈ ಹಡಗು 1,771 ಟಿಇಯು (ಟ್ವೆಂಟಿ ಫೂಟ್ ಈಕ್ವೆಲೆಂಟ್ ಯೂನಿಟ್) ಹಾಗೂ 1,265 ಪ್ರಮುಖ ಕಂಟೈನರ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಮಂಗಳೂರಿಗೆ ಬಂದ ಹಡಗನ್ನು ಜಲಫಿರಂಗಿ ಮೂಲಕ ಸ್ವಾಗತಿಸಲಾಯಿತು. ಕಂಟೈನರ್ ನಿರ್ವಹಣೆಗೆ ಎನ್​ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಭಾನುವಾರ ಸಂಜೆ ಆಗಮಿಸಿದ ಈ ಹಡಗು, ಸರಕುಗಳನ್ನು ಹೊತ್ತು ಇಂದು ಅಥವಾ ನಾಳೆ ನಿರ್ಗಮಿಸುವ ಸಾಧ್ಯತೆಯಿದೆ.

ಮೈನ್​ಲೈನ್ ಕಂಟೈನರ್ ಹಡಗಿಗೆ ಜಲಫಿರಂಗಿ ಸ್ವಾಗತ

ಯಾವುದೇ ಬಂದರಿಗೆ ಮೈನ್‌ಲೈನ್ ಕಂಟೈನರ್ ಸಾಗಣೆಯ ಹಡಗು ಆಗಮಿಸಬೇಕಾದರೆ ಅದಕ್ಕೆ ಬೇಕಾಗುವಷ್ಟು ಕಂಟೈನರ್ ಸರಕುಗಳು ಇರುವುದು ಅಗತ್ಯ. ಇಲ್ಲದಿದ್ದರೆ ಮಧ್ಯಮ ಗಾತ್ರದ ಹಡಗುಗಳಲ್ಲೇ ಸರಕುಗಳನ್ನು ತುಂಬಿಸಿ ಇತರ ಬಂದರಿಗೆ ಕೊಂಡೊಯ್ದು, ಬಳಿಕ ಅಲ್ಲಿ ಮೈನ್‌ಲೈನ್ ಕಂಟೈನರ್ ಹಡಗಿಗೆ ತುಂಬಿಸಲಾಗುತ್ತದೆ. ಈಗ ಅವಶ್ಯವಿರುವಷ್ಟು ಸರಕು ನವಮಂಗಳೂರು ಬಂದರಿನಲ್ಲಿ ಲಭ್ಯವಿರುವುದರಿಂದ ಮೈನ್​ಲೈನ್ ಕಂಟೈನರ್ ಹಡಗು ಇಲ್ಲಿಗೆ ಆಗಮಿಸಿದೆ.

ಹಡಗಿನೊಂದಿಗೆ ಬಂದರು ಸಿಬ್ಬಂದಿ

ಇದನ್ನೂ ಓದಿ:ದಕ್ಷಿಣಕನ್ನಡದಲ್ಲಿ ವರುಣನ ಅಬ್ಬರ: ಬೆಳ್ತಂಗಡಿ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ

ABOUT THE AUTHOR

...view details