ಕರ್ನಾಟಕ

karnataka

ETV Bharat / state

ಸ್ಯಾನಿಟೈಸರ್​ ಬಳಕೆಗೆ ನೂತನ ವಿಧಾನ ಆವಿಷ್ಕರಿಸಿದ ಪುತ್ತೂರಿನ ವಿದ್ಯಾರ್ಥಿ - invention by puttur 8 standard stuedent

ದೇಶದಲ್ಲಿ ಲಾಕ್​​ಡೌನ್ ಸಡಿಲಿಕೆ ಮಾಡಲಾಗಿದ್ದು, ಕೊರೊನಾ ಜೊತೆಯೇ ನಮ್ಮ ಬದುಕು ಎನ್ನುವ ಸೂಚನೆಯನ್ನೂ ನೀಡಲಾಗಿದೆ. ಇದಕ್ಕಾಗಿ ಮಾಸ್ಕ್ , ಸಾಮಾಜಿಕ ಅಂತರ, ಸ್ಯಾನಿಟೈಸರ್ ಅನಿವಾರ್ಯವೂ ಆಗಿದೆ. ಸ್ಯಾನಿಟೈಸರ್ ಬಳಸುವ ವಿಧಾನದಲ್ಲೂ ಬದಲಾವಣೆ ಅಗತ್ಯವಿದ್ದು, ದಕ್ಷಿಣ ಕನ್ನಡದ ಪೋರನೊಬ್ಬ ಇದರ ಬಳಕೆಗೆ ಹೊಸ ಸಂಶೋಧನೆಯನ್ನು ನಡೆಸಿದ್ದಾನೆ.

ಪೋರನ ನೂತನ ಆವಿಸ್ಕಾರ
ಪೋರನ ನೂತನ ಆವಿಸ್ಕಾರ

By

Published : May 22, 2020, 5:32 PM IST

ಪುತ್ತೂರು ( ಮಂಗಳೂರು): ಕೊರೊನಾದಿಂದ ದೂರ ಉಳಿಯಬೇಕೆಂದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೈಗಳನ್ನು ಆಗಾಗ ತೊಳೆಯುವುದರಿಂದ ಸಾಧ್ಯ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯಾಗಿದೆ.

ಕೈ ತೊಳೆಯುವ ವಿಧಾನದಲ್ಲೂ ಬದಲಾವಣೆಯ ಅಗತ್ಯವಿದೆ ಎನ್ನುವುದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಾಲಕನೊಬ್ಬ ಸ್ಯಾನಿಟೈಸರ್ ಬಳಕೆಯ ಯಂತ್ರವೊಂದನ್ನು ತಯಾರಿಸಿದ್ದಾನೆ.

ಪೋರನ ನೂತನ ಆವಿಸ್ಕಾರ

ಪುತ್ತೂರಿನ ನಿವಾಸಿ ಎಂಟನೇ ತರಗತಿಯ ವಿದ್ಯಾರ್ಥಿ ನಿಹಾಲ್ ಈ ಸಾಧನೆ ಮಾಡಿದ ಪೋರ. ಸ್ಯಾನಿಟೈಸರ್​​​ಗಳನ್ನು ಬಹುತೇಕ ಎಲ್ಲಾ ಕಚೇರಿಗಳಲ್ಲಿ ಬಳಸುತ್ತಿದ್ದಾರೆ. ಇದಕ್ಕಾಗಿ ಕೆಲವು ಕಡೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಇಲ್ಲವೇ ಸ್ಯಾನಿಟೈಸರ್​ ಅನ್ನು ಕಚೇರಿಯ ಬಾಗಿಲ ಬಳಿಯಿಟ್ಟು ಒಳ ಬರುವವರು ಅದನ್ನು ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದರಿಂದ ರೋಗಾಣು ಇತರರಿಗೂ ಹರಡುವ ಸಾಧ್ಯತೆ ಇದೆ. ಇದನ್ನು ಮನಗಂಡ ಈ ವಿದ್ಯಾರ್ಥಿ ಕಾಲಲ್ಲಿ ಒತ್ತಿ ಸ್ಯಾನಿಟೈಸರ್ ಬಳಸಬಹುದಾದ ಯಂತ್ರವನ್ನು ತಯಾರಿಸಿದ್ದಾನೆ.

ಪೋರನ ನೂತನ ಆವಿಸ್ಕಾರ

ಸಾಮಾನ್ಯ ತಂತ್ರಜ್ಞಾನವನ್ನು ಬಳಸಿ ಈ ಯಂತ್ರವನ್ನು ನಿಹಾಲ್​ ತಯಾರಿಸಿದ್ದಾನೆ. ಈ ಯಂತ್ರಗಳನ್ನು ಪುತ್ತೂರಿನ ಎಲ್ಲಾ ಸರ್ಕಾರಿ ಕಚೇರಿಗಳಿಗೆ ನೀಡುತ್ತಿದ್ದಾನೆ. ಯುಪಿವಿಸಿ ಪೈಪ್ ಮೂಲಕ ಈ ಯಂತ್ರ ತಯಾರಿಸಿದ್ದು, ಒಂದು ಯಂತ್ರಕ್ಕೆ ಸುಮಾರು 1,000 ದಿಂದ 1,500 ರೂ. ಖರ್ಚಾಗುತ್ತದೆ. ಆಸಕ್ತರಿಗೆ ಇದನ್ನು ಪೂರೈಸುವ ಇಚ್ಛೆಯನ್ನೂ ಹೊಂದಿದ್ದಾನೆ.

ABOUT THE AUTHOR

...view details