ಕರ್ನಾಟಕ

karnataka

ETV Bharat / state

ಮದುವೆಯಾದ ಮೊದಲ ರಾತ್ರಿ ಹೃದಯಾಘಾತದಿಂದ ವಧು ಸಾವು.. ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ - ಹೃದಯಾಘಾತದಿಂದ ನವ ವಧು ಸಾವು

ರಾತ್ರಿ ವರ ಮುಬಾರಕ್ ಅತ್ತೆ ಮನೆಗೆ ಬಂದಿದ್ದರು‌. ನವಜೋಡಿಯೂ ಸಂಭ್ರದಲ್ಲಿತ್ತು. ಆದರೆ, ಏಕಾಏಕಿ ನಿನ್ನೆ ತಡರಾತ್ರಿ ಲೈಲಾ ಅಫಿಯಾ ಅವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ..

ಮದುವೆಯಾದ ರಾತ್ರಿಯೇ ಹೃದಯಾಘಾತದಿಂದ ವಧು ಸಾವು
New bride died by heart attack in Mangalore

By

Published : Mar 1, 2021, 11:08 AM IST

Updated : Mar 1, 2021, 2:07 PM IST

ಮಂಗಳೂರು :ಮದುವೆಯ ಸಂಭ್ರಮದಲ್ಲಿದ್ದ ನವವಧು ಮದುವೆಯಾದ ಮೊದಲ ರಾತ್ರಿಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ.

ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ ಹೆಚ್​​​ಕೆ ಅಬ್ದುಲ್ ಕರೀಂ ಹಾಜಿ ಎಂಬುವರ ಪುತ್ರಿ ಲೈಲಾ ಅಫಿಯಾ(24) ಮೃತ ದುರ್ದೈವಿ. ಅಫಿಯಾ ಅವರ ಮದುವೆ ನಿನ್ನೆ ಮುಬಾರಕ್ ಎಂಬುವರ ಜೊತೆ ನಡೆದಿತ್ತು.

ಓದಿ: ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ : ಇಬ್ಬರು ಸಾವು, 10 ಮಂದಿಗೆ ಗಾಯ

ರಾತ್ರಿ ವರ ಮುಬಾರಕ್ ಅತ್ತೆ ಮನೆಗೆ ಬಂದಿದ್ದರು‌. ನವಜೋಡಿಯೂ ಸಂಭ್ರದಲ್ಲಿತ್ತು. ಆದರೆ, ಏಕಾಏಕಿ ನಿನ್ನೆ ತಡರಾತ್ರಿ ಲೈಲಾ ಅಫಿಯಾ ಅವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

Last Updated : Mar 1, 2021, 2:07 PM IST

ABOUT THE AUTHOR

...view details