ಬಂಟ್ವಾಳ: 9 ತಿಂಗಳ ಬಳಿಕ ಕಲಾವಿದರ ಬದುಕಿನಲ್ಲಿ ನಿಧಾನವಾಗಿ ಹೊಸ ಬೆಳಕು ಮೂಡುತ್ತಿರುವ ಈ ಕಾಲಘಟ್ಟದಲ್ಲಿ ಉತ್ತಮ ಗುಣಮಟ್ಟದ ಹೆಚ್ಚು ಚಿತ್ರಗಳು ತಯಾರಾಗಬೇಕಾಗಿದೆ. ಈ ದಿಸೆಯಲ್ಲಿ ವಿದ್ಯಾವಂತ ಯುವ ಲೇಖಕ, ನಿರ್ದೇಶಕರ ಅಗತ್ಯವಿದೆ ಎಂದು ತುಳು ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದ್ದಾರೆ.
ಚಿತ್ರರಂಗಕ್ಕೆ ಹೊಸತನ ಅಗತ್ಯ: ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ - Director vijayakumar kodiyal bail
ಇಂದು ಹೊಸ ಸಿನಿಮಾಗಳು, ಕಿರುಚಿತ್ರಗಳು ನಿರ್ಮಾಣವಾಗುತ್ತಿವೆ. ಆದರೆ ಒಂದೇ ರೀತಿಯ ಕತೆಗಳು ಕಂಡು ಬರುತ್ತಿವೆ. ಹೀಗಾಗಿ ಹೊಸ ವಿಷಯಗಳು, ಕತೆಯಲ್ಲಿ ಗಟ್ಟಿತನವನ್ನು ಒದಗಿಸುವ ವಿದ್ಯಾವಂತ ಯುವ ಲೇಖಕರ ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.
ಚಿತ್ರರಂಗಕ್ಕೆ ಹೊಸತನ ಅಗತ್ಯ: ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್
ಪುಂಜಾಲಕಟ್ಟೆಯ ಮಂತ್ರದೇವತೆ ಕ್ರಿಯೇಷನ್ಸ್ ಅವರ ಚಂದ್ರನ್ ಕಿರುಚಿತ್ರದ ಪ್ರಥಮ ಪೋಸ್ಟರ್ಅನ್ನು ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಬ ಕ್ಷೇತ್ರದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು. ಇಂದು ಹೊಸ ಸಿನಿಮಾಗಳು, ಕಿರುಚಿತ್ರಗಳು ನಿರ್ಮಾಣವಾಗುತ್ತಿವೆ. ಆದರೆ ಒಂದೇ ರೀತಿಯ ಕತೆಗಳು ಕಂಡು ಬರುತ್ತಿವೆ ಎಂದು ವಿಷಾದಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಯುವಜನತೆ ಮಾಡುವಂತ ಸಮಾಜಮುಖಿ, ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ಕೆ ಹಿರಿಯರು, ನಾಗರಿಕರು ಪ್ರೋತ್ಸಾಹ ನೀಡಬೇಕು ಎಂದರು.