ಬಂಟ್ವಾಳ :ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಜೊತೆಗೆ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ನೇತ್ರಾವತಿ ಮತ್ತು ಕುಮಾರಧಾರಾ ನದಿಯ ನೀರಿನ ಹರಿವು ಹೆಚ್ಚಳವಾಗಿದೆ.
ನೇತ್ರಾವತಿ, ಕುಮಾರಧಾರಾ ನದಿ ನೀರಿನ ಹರಿವು ಹೆಚ್ಚಳ - ನದಿ ನೀರಿನ ಮಟ್ಟ ಹೆಚ್ಚಳ
ಗುಂಡ್ಯ ಹೊಳೆಯೂ ಅಪಾಯದ ಮಟ್ಟ ಸನಿಹ ಬಂದಿದ್ದು 4.7 ಮೀ ಎತ್ತರ (ಅಪಾಯದ ಮಟ್ಟ 5 ಮೀ)ದಲ್ಲಿ ಹರಿಯುತ್ತಿದೆ. ಇನ್ನು, ಶಂಭೂರು ಎಎಂಆರ್ ಡ್ಯಾಂ ಭರ್ತಿಯಾಗಿದೆ. ಕಡಬ ದಿಶಾ ಡ್ಯಾಂನಲ್ಲಿ 4.7 ಮೀ ಎತ್ತರಕ್ಕೆ ನೀರು ಸಂಗ್ರಹವಿದೆ..
ಶುಕ್ರವಾರ ನೇತ್ರಾವತಿ ನದಿ 7.4 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿ 7.4 ಮೀಟರ್ (8.5 ಅಪಾಯದ ಮಟ್ಟ), ಉಪ್ಪಿನಂಗಡಿಯಲ್ಲಿ 28.7 ಮೀ (ಅಪಾಯದ ಮಟ್ಟ 31.5 ಮೀ), ಇದೆ. ಕುಮಾರಧಾರಾ ನದಿ ಉಪ್ಪಿನಂಗಡಿಯಲ್ಲಿ 27 ಮೀಟರ್ (ಅಪಾಯದ ಮಟ್ಟ 26.5 ಮೀ) ಎತ್ತರದಲ್ಲಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿದೆ.
ಅದೇ ರೀತಿ ಗುಂಡ್ಯ ಹೊಳೆಯೂ ಅಪಾಯದ ಮಟ್ಟ ಸನಿಹ ಬಂದಿದ್ದು 4.7 ಮೀ ಎತ್ತರ (ಅಪಾಯದ ಮಟ್ಟ 5 ಮೀ)ದಲ್ಲಿ ಹರಿಯುತ್ತಿದೆ. ಇನ್ನು, ಶಂಭೂರು ಎಎಂಆರ್ ಡ್ಯಾಂ ಭರ್ತಿಯಾಗಿದೆ. ಕಡಬ ದಿಶಾ ಡ್ಯಾಂನಲ್ಲಿ 4.7 ಮೀ ಎತ್ತರಕ್ಕೆ ನೀರು ಸಂಗ್ರಹವಿದೆ. ತುಂಬೆ ಡ್ಯಾಂನಲ್ಲಿ 6.4 ಮೀ ಎತ್ತರದಲ್ಲಿ ಸಂಗ್ರಹವಿದೆ. ಎಲ್ಲ 30 ಗೇಟ್ಗಳನ್ನು ತೆರೆಯಲಾಗಿದೆ. (ಗರಿಷ್ಠ 7 ಮೀ). ನೀರಕಟ್ಟೆ ಸಾಗರ್ ಡ್ಯಾಂನಲ್ಲಿ 34.3 ಮೀಟರ್ ಸಂಗ್ರಹವಿದ್ದು, ಗರಿಷ್ಠ 38 ಮೀಟರ್ ಆಗಿದೆ.