ಉಳ್ಳಾಲ: ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ನದಿ ಮೈದುಂಬಿ ಹರಿಯುತ್ತಿದೆ.
ಮೈದುಂಬಿ ಹರಿಯುತ್ತಿರುವ ನೇತ್ರಾವತಿ: ಉಳ್ಳಾಲ ವ್ಯಾಪ್ತಿಯಲ್ಲಿ ನೆರೆ ಭೀತಿ! - ಪಶ್ಚಿಮಘಟದಲ್ಲಿ ಮಳೆ
ಪಶ್ಚಿಮ ಘಟದ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗಿನಿಂದಲೇ ಧಾರಾಕಾರವಾಗಿ ಮಳೆ ಸುರಿದಿದ್ದು, ಉಳ್ಳಾಲ ವ್ಯಾಪ್ತಿಯ ನೇತ್ರಾವತಿ ತಟದಲ್ಲಿ ನೇತ್ರಾವತಿ ನದಿ ನೀರು ಮೈದುಂಬಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು ಜನರಲ್ಲಿ ನೆರೆ ಭೀತಿ ಆವರಿಸಿದೆ.
ಉಳ್ಳಾಲ
ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ನದಿ ನೀರಿನ ಮಟ್ಟ ಹೆಚ್ಚಳವಾಗಿ ರಾಣೀಪುರ ಉಳಿಯ ಹಲವು ಮನೆಗಳಿಗೆ ನೀರು ನುಗ್ಗಿದೆ. ತುಂಬೆ ಡ್ಯಾಮ್ನಿಂದ ನೀರು ಹೊರ ಬಿಡುವ ಸಾದ್ಯತೆಯಿದೆ.
ನೇತ್ರಾವತಿ ತಟದಲ್ಲಿ ವಾಸಿಸುವ ಉಳ್ಳಾಲ ತೋಟ, ಪಟ್ಲ, ಕಲ್ಲಾಪು, ಅಲೇಕಳ, ಕೊಟ್ಟಾರ, ಮಾರ್ಗತಲೆ, ಮಿಲ್ಲತ್ ನಗರ, ಬಂಡಿ ಕೊಟ್ಯ, ಅಕ್ಕರೆ ಕೆರೆ ಹಾಗೂ ಇನ್ನಿತರ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಗುರುಪ್ರಸಾದ್ ಅವರು, ಪ್ರವಾಹದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.