ಕರ್ನಾಟಕ

karnataka

ETV Bharat / state

ನೇಪಾಳ ಮೂಲದ ಮಹಿಳೆ ಮಂಗಳೂರಿನಲ್ಲಿ ನಾಪತ್ತೆ - woman missing in manglore

ಕಳೆದ ಮೂರು ವರ್ಷದಿಂದ ಮಂಗಳೂರಿನಲ್ಲಿ ನೆಲೆಸಿದ್ದ ನೇಪಾಳ ಮೂಲದ ಸೀತಾ ಬೊಹರಾ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ.

mangalore
ನೇಪಾಳದ ಮಹಿಳೆ ಮಂಗಳೂರಿನಲ್ಲಿ ನಾಪತ್ತೆ

By

Published : Sep 30, 2021, 9:08 PM IST

ಮಂಗಳೂರು:ನಗರದಲ್ಲಿ ಮೂರು ವರ್ಷಗಳಿಂದ ವಾಸಿಸುತ್ತಿದ್ದ ನೇಪಾಳ ಮೂಲದ ಮಹಿಳೆ ನಾಪತ್ತೆಯಾಗಿರುವುದಾಗಿ ಆಕೆಯ ಪತಿ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೇಪಾಳ ಮೂಲದ ಉಮೇಶ್ ಬೊಹರಾ ಪತ್ನಿ ಸೀತಾ ಬೊಹರಾ ನಾಪತ್ತೆಯಾದ ಮಹಿಳೆ. ಉಮೇಶ್ ಬೊಹರಾ ಅವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ನೇಪಾಳದಿಂದ ಮಂಗಳೂರಿಗೆ 3 ವರ್ಷಗಳ ಹಿಂದೆ ಬಂದು ನೆಲೆಸಿದ್ದರು. ಮಂಗಳೂರಿನಲ್ಲಿ ಸೆಕ್ಯೂರಿಟಿ ವೃತ್ತಿ ನಿರ್ವಹಿಸುತ್ತಿದ್ದರು. ಅವರ ಪತ್ನಿ ಸೀತಾ ಬೊಹರಾ ಮನೆಗೆಲಸ ಮಾಡುತ್ತಿದ್ದರು.

ಎಂದಿನಂತೆ ಸೀತಾ ಬೊಹರಾ ಸೆ.27 ರಂದು ಮಧ್ಯಾಹ್ನ ಸುಮಾರು 1:30-2 ಗಂಟೆ ಮಧ್ಯೆ ಮನೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದರು. ಆದರೆ ಅವರು ಈವರೆಗೆ ಮನೆಗೆ ವಾಪಸ್ ಬಂದಿಲ್ಲ. ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ವಿಚಾರಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ಆಕೆಯ ಪತಿ ಉಮೇಶ್ ಬೊಹರಾ ತಿಳಿಸಿದ್ದಾರೆ‌.

ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದಲಿತ ಯುವತಿ ಮೇಲೆ ಗ್ಯಾಂಗ್​ರೇಪ್​: ಬಲವಂತದ ಗರ್ಭಪಾತದ ವೇಳೆ ದುರ್ಮರಣ

ABOUT THE AUTHOR

...view details