ಕರ್ನಾಟಕ

karnataka

ETV Bharat / state

ನೆಹರೂ ಕುಟುಂಬವನ್ನು ಅಪಹಾಸ್ಯ ಮಾಡುವುದು ದೊಡ್ಡ ದುರಂತ: ರಮಾನಾಥ ರೈ - Former Minister B. Ramanatha Rai

ಗಾಂಧೀಜಿ, ನೆಹರೂ ಮುಂತಾದ ನಾಯಕರ ಆದರ್ಶಗಳು ದೇಶದಾದ್ಯಂತ ಅನಾವರಣಗೊಳ್ಳಬೇಕಾದ ಅಗತ್ಯವಿದೆ. ಆದರೆ ನೆಹರೂ ಕುಟುಂಬವನ್ನು ಅಪಹಾಸ್ಯ ಮಾಡುವುದು ದೊಡ್ಡ ದುರಂತ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

Ramanatha Rai
ನೆಹರೂ ಕುಟುಂಬ ಅಪಹಾಸ್ಯ ದೊಡ್ಡ ದುರಂತ: ರಮಾನಾಥ ರೈ

By

Published : May 27, 2020, 11:36 PM IST

ಮಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದಿರುವ ನೆಹರೂ ಕುಟುಂಬವನ್ನು ಅಪಹಾಸ್ಯ ಮಾಡುವವರು ದೇಶದಲ್ಲಿ ಸೃಷ್ಟಿಯಾಗಿರುವುದು ಬಹು ದೊಡ್ಡ ದುರಂತ. ಗಾಂಧೀಜಿ, ನೆಹರೂ ಮುಂತಾದ ನಾಯಕರ ಆದರ್ಶಗಳು ದೇಶದಾದ್ಯಂತ ಅನಾವರಣಗೊಳ್ಳಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಪಂಡಿತ್ ಜವಾಹರಲಾಲ್ ನೆಹರೂರವರ 56ನೇ ಪುಣ್ಯತಿಥಿ ಕಾರ್ಯಕ್ರಮ
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ 56ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ನೆಹರೂ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿದರು.

ಆಲಿಪ್ತ ನೀತಿ, ಪಂಚಶೀಲ ತತ್ವಗಳ ಮೂಲಕ ಜಾಗತಿಕ ಮನ್ನಣೆಗೆ ಭಾರತವು ಪಾತ್ರವಾಗಲು ಕಾರಣೀಭೂತರಾದ ಪಂಡಿತ್ ಜವಾಹರಲಾಲ್ ನೆಹರೂರವರು, ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಇಬ್ರಾಹೀಂ ಕೋಡಿಜಾಲ್, ಮ.ನ.ಪಾ. ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ಪಕ್ಷದ ಮುಖಂಡರಾದ ಪಿ.ವಿ. ಮೋಹನ್, ಶಶಿಧರ್ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಪ್ರಸಾದ್ ರಾಜ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details