ಮಂಗಳೂರು: ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲವರ್ಧನೆ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬಂಟ್ವಾಳದ ಪಾಣೆಮಂಗಳೂರಿನ ಸಾಗರ ಅಡಿಟೋರಿಯಂನಲ್ಲಿ ಕಾಂಗ್ರೆಸ್ ಪಕ್ಷದ ಮೈಸೂರು ವಿಭಾಗೀಯ ಮಟ್ಟದ ಪ್ರತಿನಿಧಿಗಳ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಪಂಚಾಯತ್ ಮಟ್ಟದಲ್ಲಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕಾಗಿದೆ ಎಂದರು.
ಪಕ್ಷದ ಯಾವುದೇ ನಾಯಕರಾದರೂ ಬೂತ್ ಮಟ್ಟದಿಂದ ಬರಬೇಕು. ಅವರು ತಮ್ಮ ಸ್ಥಳೀಯ ಬೂತ್ ಮಟ್ಟದಲ್ಲಿ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಬೇಕು. ನಮ್ಮ ಸಿದ್ಧಾಂತವನ್ನು ಪಕ್ಷದ ಗುರಿಯನ್ನು ದೂರ ಇಟ್ಟರೆ ಸೋಲುತ್ತೇವೆ. ಅದಕ್ಕಾಗಿ ಏನೇ ಒತ್ತಡ ಬಂದರೂ ಪಕ್ಷದ ಸಿದ್ಧಾಂತ ನೀತಿ ಬಿಡಬಾರದು ಎಂದರು.