ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ನಡೆಯಬೇಕಿದೆ ಹೊರ ರಾಜ್ಯದ ವಲಸೆ ಕಾರ್ಮಿಕರ ತಪಾಸಣಾ ಕಾರ್ಯ - More vandalism in Dakshina Kannada

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ಅಧಿಕ ವಿಧ್ವಂಸಕ ಕೃತ್ಯಗಳು ನಡೆಯುತ್ತಿದ್ದು, ಜಿಲ್ಲೆಗೆ ಆಗಮಿಸಿರುವ ಹೊರ ರಾಜ್ಯದ ವಲಸೆ ಕಾರ್ಮಿಕರ ತಪಾಸಣಾ ಕಾರ್ಯ ನಡೆಸಬೇಕಿದೆ.

migrant workers
ವಲಸೆ ಕಾರ್ಮಿಕರು

By

Published : Nov 28, 2022, 8:30 AM IST

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವಿಧ್ವಂಸಕ ಕೃತ್ಯಗಳು ಮರುಕಳಿಸುತ್ತಿದ್ದು, ಪೊಲೀಸರು ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜೊತೆಗೆ ಕೆಲಸದ ನೆಪವೊಡ್ಡಿ ಯಾವುದೇ ಮಾಹಿತಿ ನೀಡದೇ ಹೊರ ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ಇಲ್ಲಿ ನೆಲೆ ನಿಂತವರ ಕುರಿತು ಮಾಹಿತಿ ಕಲೆ ಹಾಕಲು ಮುಂದಾಗಬೇಕು.

ಅಕ್ರಮ ಮರಳು ಅಡ್ಡೆಗಳಲ್ಲಿ, ರಬ್ಬರ್, ಅಡಕೆ ತೋಟಗಳಲ್ಲಿ, ಗಾರೆ ಕೆಲಸ, ಟೈಲ್ಸ್, ಗ್ರಾನೈಟ್, ಹೋಟೆಲ್, ಅಂಗಡಿ, ಬಾರ್‌ ಹಾಗೂ ಇಲ್ಲಿನ ಕೆಲವು ಎಸ್ಟೇಟ್‌ಗಳಲ್ಲಿ ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆ ಎಂದು ಬಂದು ನೆಲೆನಿಂತವರು ಅನೇಕರಿದ್ದಾರೆ. ಇವರು ಯಾರು? ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಈ ತನಕ ಯಾರಿಗೂ ಗೊತ್ತಿಲ್ಲ. ಯಾರು ಈ ಬಗ್ಗೆ ವಿಚಾರಿಸಿಯೂ ಇಲ್ಲ. ಸ್ಥಳೀಯ ಕೆಲಸಗಾರರ ಅಲಭ್ಯತೆ ಹಿನ್ನೆಲೆಯಲ್ಲಿ ಇವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಯಾರು ಮಂದಾಗುತ್ತಿಲ್ಲ ಎನ್ನಲಾಗಿದೆ.

ಹೊರ ರಾಜ್ಯಗಳಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ತಿರುಗಾಡುತ್ತಿರುವ ಇಂತಹವರ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಂದು ಇಲ್ಲಿ ಆರಾಮಾಗಿರುತ್ತಾರೆ. ಇತ್ತೀಚೆಗೆ ಕೇರಳದ ತಿರುವನಂತಪುರಂ ವೆಂಜಾರಮೂಡ್ ಎಂಬಲ್ಲಿಂದ ಬಂದ ಆರೋಪಿಯೊಬ್ಬನನ್ನು ಅಲ್ಲಿನ ಪೊಲೀಸರು ಕಡಬಕ್ಕೆ ಬಂದು ಬಂಧಿಸಿ, ಕರೆದೊಯ್ದಿದ್ದರು.

ಆದರೆ, ಈ ಕುರಿತು ಕಡಬ ಪೊಲೀಸರಿಗೇ ಮಾಹಿತಿ ಲಭ್ಯವಾಗಿರಲಿಲ್ಲ. ಅದೇ ತರಹ ಸುಳ್ಯದಲ್ಲಿ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿಟ್ಟು ಪಶ್ಚಿಮ ಬಂಗಾಳದ ಇಮ್ರಾನ್ ಎಂಬಾತ ಪರಾರಿಯಾಗಿದ್ದ. ಮಾತ್ರವಲ್ಲದೇ, ಇದೇ ರೀತಿ ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಹೊರ ರಾಜ್ಯಗಳ ಹಲವಾರು ಆರೋಪಿಗಳು ಪತ್ತೆಯಾಗಿದ್ದರು.

ಇದನ್ನೂ ಓದಿ:ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ: ತಮಿಳುನಾಡಿನಲ್ಲಿ ಶಾರಿಕ್​ ಹೆಜ್ಜೆ ಗುರುತು ಶೋಧ

ಎಲ್ಲೆಲ್ಲಿ ಇದ್ದಾರೆ?: ಪ್ರಾಥಮಿಕ ಮಾಹಿತಿ ಪ್ರಕಾರ, ಕೆಲವರು ಅಕ್ರಮ ಮರಳು ದಂಧೆಯ ತಂಡದೊಂದಿಗೆ ನದಿ ಮರಳುಗಾರಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಗೆ ಈ ತನಕ ಯಾವುದೇ ಪೊಲೀಸ್​ ಅಧಿಕಾರಿಗಳು ಭೇಟಿ ನೀಡುವುದಾಗಲಿ, ದಾಳಿ ಮಾಡಿರುವುದಾಗಲಿ ವಿರಳ. ಇನ್ನೂ ಕೆಲವರು ಹೋಟೆಲ್‌ನಲ್ಲಿ ಸಪ್ಲೈ, ಗ್ಲಾಸ್​ ತೊಳೆಯುವ ಕೆಲಸ, ಟೈಲ್ಸ್, ಗ್ರಾನೈಟ್, ಗಾರೆ ಕೆಲಸ, ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕೇರಳ ಕಡೆಯಿಂದ ಬಂದ ಹೆಚ್ಚಿನವರು ರಬ್ಬರ್, ಅಡಕೆ, ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೇಳುವುದು ಅಸ್ಸೋಂ, ದೆಹಲಿಯವರೆಂದು: ಹೀಗೆ ವಿವಿಧ ಕಡೆ ಕೆಲಸ ಮಾಡುವವರು ಹೇಳುವುದು ತಾವು ಅಸ್ಸೋಂನಿಂದ , ದೆಹಲಿಯಿಂದ ಬಂದವರೆಂದು. ಆದರೆ, ಹೊರ ದೇಶಗಳಿಂದಲೂ ಕದ್ದು ನಮ್ಮ ದೇಶದ ಒಳಗೆ ನುಗ್ಗಿರುವ ವ್ಯಕ್ತಿಗಳು ಕೂಡ ಹಗಲು ವೇಷ ಹಾಕಿಕೊಂಡು ನಮ್ಮ ಮುಂದೆಯೇ ತಿರುಗಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇವರ ಚಟುವಟಿಕೆಗಳು ಅತ್ಯಂತ ನಿಗೂಢವಾಗಿದೆ. ಹೀಗಾಗಿ, ಇವರಿರುವ ಸ್ಥಳಗಳನ್ನು ಪೊಲೀಸರು ತಪಾಸಣೆ ನಡೆಸಬೇಕಿದೆ. ಅನುಮಾನ ಬಂದವರನ್ನು ಹಾಗೂ ಇವರನ್ನು ಇಲ್ಲಿಗೆ ಕರೆ ತಂದವರನ್ನು ವಿಚಾರಣೆ ನಡೆಸಬೇಕಿದೆ. ಮುಖ್ಯವಾಗಿ ಇಂತಹ ಜನರಿಗೆ ಕೆಲಸ ಕೊಡುವ ಮಾಲೀಕರನ್ನು ವಿಚಾರಣೆ ನಡೆಸಬೇಕು. ಕೆಲಸಕ್ಕೆ ಸೇರಿಸಿಕೊಂಡವರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸಬೇಕಾಗಿದೆ.

ಇದನ್ನೂ ಓದಿ:ಬೆಳ್ತಂಗಡಿಯಲ್ಲಿ ಸ್ಯಾಟಲೈಟ್ ಕರೆ, ಸ್ಫೋಟದ ಬಗ್ಗೆ ಎಸ್​ಪಿ ರಿಷಿಕೇಶ್ ಭಗವಾನ್ ಸೋನಾವಣೆ ಸ್ಪಷ್ಟನೆ

ಪೊಲೀಸರಿಗೆ ಮಾಹಿತಿ ನೀಡಿ: ಸಾರ್ವಜನಿಕರಿಗೆ ಇಂತಹ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಸಂಬಂಧಪಟ್ಟವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸುತ್ತಮುತ್ತಲು ಸಂಭವಿಸುವ ಅಪಾಯ ತಪ್ಪಿಸಲು ಸಾಧ್ಯವಿದೆ. ಈಗಾಗಲೇ ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ ನಂತರ ಮೈಸೂರಿನ ಪೊಲೀಸರು ಈ ಬಗ್ಗೆ ಪ್ರಕಟಣೆ ಹೊರಡಿಸಿ ಸುರಕ್ಷಾ ನಮೂನೆ ಬಿಡುಗಡೆ ಮಾಡಿದ್ದು, ಬಾಡಿಗೆದಾರರ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಕೂಡಲೇ ಈ ನಿಯಮ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನುಷ್ಠಾನಕ್ಕೆ ಬರಬೇಕಿದೆ.

ಇದನ್ನೂ ಓದಿ:'ನಮಗೆ ಯಾರೂ ಸಹಾಯ ಮಾಡಲ್ಲ': ದೆಹಲಿ ತೊರೆಯುತ್ತಿರುವ ವಲಸೆ ಕಾರ್ಮಿಕರ ವೇದನೆ

ABOUT THE AUTHOR

...view details