ಮಂಗಳೂರು:ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿದೆ. ನಾಡಿನೆಲ್ಲೆಡೆ ನವರಾತ್ರಿ ಉತ್ಸವದ ಮೆರಗು ತುಂಬಿದ್ದು, ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದಿನಿಂದ ಅ.16ರವರೆಗೆ 'ನಮ್ಮ ದಸರಾ - ನಮ್ಮ ಸುರಕ್ಷೆ' ಎಂಬ ಘೋಷವಾಕ್ಯದಡಿ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ.
ಅ.16 ರಂದು ಸಂಜೆ ಪೂಜೆ ಸಂಪನ್ನಗೊಂಡು ರಾತ್ರಿ ವೇಳೆಗೆ ದೇವಳಕ್ಕೆ ಒಂದು ಸುತ್ತು ಬಂದು ಶ್ರೀ ಶಾರದಾ ಮಾತೆ, ಶ್ರೀಮಹಾಗಣಪತಿ ದೇವರ ಸಹಿತ ನವದುರ್ಗೆಯರ ಮೂರ್ತಿಯನ್ನು ದೇವಳದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಗುತ್ತದೆ.